ಟೇಕಾಫ್ ವೇಳೆ ನೆಲಕ್ಕಪ್ಪಳಿಸಿ ಸ್ಪೋಟಗೊಂಡ ಕಾರ್ಗೋ ವಿಮಾನ : ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೋಗೋಟಾ, ಡಿ.23– ಸರಕು ಸಾಗಣೆ ವಿಮಾನವೊಂದು ಗಗನಕ್ಕೇರುವಾಗ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ದುರಂತ ಕೊಲಂಬಿಯಾದ ಪೂರ್ವ ಭಾಗದ ಓಲಾನೊ ವಿಮಾನನಿಲ್ದಾಣದ ಬಳಿ ಸಂಭವಿಸಿದೆ. ಗಗನಕ್ಕೇರುವಾಗ ನಿಯಂತ್ರಣ ಕಳೆದುಕೊಂಡ ವಿಮಾನ ಲಾರಿ ಬಸ್‍ಗಳಂತೆ ರಸ್ತೆಯಲ್ಲಿದ್ದ ಜನಗಳ ಮೇಲೆ ನುಗ್ಗಿತು. ಇದರಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡತೊಡಗಿದರು. ನಂತರ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನ ವೀಕಿಸಿದ್ದಾರೆ.

ದುರಂತದಲ್ಲಿ ಪೈಲೆಟ್, ಸಹ ಪೈಲೆಟ್, ಫ್ಲೈಟ್ ಇಬ್ಬರು ಫ್ಲೈಟ್ ಎಂಜಿನಿಯರ್‍ಗಳು ಮತ್ತು ಡಿಸ್‍ಪ್ಯಾಚರ್ ಮೃತಪಟ್ಟಿದ್ದು. ಬದುಕುಳಿದ ಏಕೈಕ ವ್ಯಕ್ತಿ ವಿಮಾನ ತಂತ್ರಜ್ಞನ ಸ್ಥಿತಿ ಗಂಭೀರವಾಗಿದೆ.
ಕೊಲಂಬಿಯನ್ ಕ್ಯಾರಿಯರ್ ಏರೋಸುಕ್ರೆ ಸಂಸ್ಥೆ ನಿರ್ವಹಿಸುತ್ತಿರುವ ಈ ಬೋಯಿಂಗ್ 727 ಸರಕು ಸಾಗಣೆ ವಿಮಾನವು ವೆನಜುವೆಲಾ ಗಡಿ ಸಮೀಪ ಪೊರ್ಟೊರೀಕೋದಿಂದ ಬೋಗೋಟಾಗೆ ಹೋಗುತ್ತಿತ್ತು. ಇದು ಓಲಾನೋ ವಿಮಾನನಿಲ್ದಾಣದಲ್ಲಿ ಟೇಕ್‍ಆಫ್ ಆದ ಕೇವಲೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿತು.  ವಿಮಾನವನ್ನು ವೀಕ್ಷಿಸುತ್ತಿದ್ದ ಗುಂಪೊಂದನ್ನು ಭೇದಿಸಿಕೊಂಡು ಮುನ್ನುಗ್ಗಿ ಮೂರು ನಿಮಿಷಗಳ ಬಳಿಕ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು. ಜನರ ಗುಂಪು ಈ ದೃಶ್ಯವನ್ನು ತಮ್ಮ ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin