ಟೈಗರ್ ಟಿಪ್ಪುಯುವಕರ ಸೇನೆಯಿಂದ ಸ್ವಾತಂತ್ರ್ಯ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ನಂಜನಗೂಡು, ಆ,16- ನಗರದ ಈದ್ಗಾ ಮೊಹಲ್ಲದಲ್ಲಿರುವ ಟೈಗರ್ ಟಿಪ್ಪು ಯುವಕರ ಸೇನೆ ವತಿಯಿಂದ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ನಗರದ ಸಬ್ ಇನ್ಸ್‍ಪೆಕ್ಟರ್ ಚೇತನ್ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭ ಹಾರೈಸಿದರು.ಅಧ್ಯಕ್ಷ ಮಹಮ್ಮದ್ ಜಿಯಾ, ಗೌರವಾಧ್ಯಕ್ಷ ಸಯ್ಯದ್ ನೂರ್ ಮಾತನಾಡಿ, ನಮ್ಮ ಮೊಹಲ್ಲಾದಲ್ಲಿ ಬಾಂಧವರಲ್ಲಿ ಪ್ರೀತಿ, ವಿಶ್ವಾಸ, ಸೌರ್ಹಾದತೆಯನ್ನುಂಟು ಮಾಡುವ ದೃಷ್ಠಿಯಿಂದ ಇದೇ ಪ್ರಥಮ ಭಾರಿಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ತೀರ್ಮಾನಿಸಲಾಗಿದ್ದು ಇದೀಗ ಬಡಾವಣೆಯಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಆಚರಿಸಿದ್ದೇವೆ. ಇನ್ನು ಮುಂದೆ ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳನ್ನೆಲ್ಲ ಆಚರಿಸಲಾಗುವುದು ಎಂದರು.ನಗರಸಭಾ ಸದಸ್ಯ ಎಂ.ರಾಜೇಶ್ ಆಶ್ರಯ ಸಮಿತಿ ಸದಸ್ಯ ಅಬ್ದುಲ್ ಖಾದರ್, ಅಖ್ತರ್ ಅಹಮದ್, ಸಯ್ಯದ್ ನಯಾಜ್, ಮೊಕ್ತರ್ ಹಾಗೂ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin