ಟೈಗರ್ ಶ್ರಾಫ್ ಈಗ ಮುನ್ನಾ ಮೈಕೆಲ್

ಈ ಸುದ್ದಿಯನ್ನು ಶೇರ್ ಮಾಡಿ

Tiger-Shroff

ಬಾಲಿವುಡ್ ಸಿಕ್ಸ್‍ಪ್ಯಾಕ್ ನಟ ಟೈಗರ್ ಶ್ರಾಫ್ ಪಾಪ್ ದಂತಕತೆ ಮೈಕೆಲ್ ಜಾಕ್ಸನ್‍ನ ಪರಮ ಅಭಿಮಾನಿ. ಆತನ ಅದೃಷ್ಟ ಎಂಬಂತೆ ಎಂಜೆ ಬದುಕಿನ ನೆರಳಿರುವ ಮುನ್ನಾ ಮೈಕೆಲ್ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿರುವ ಮೈಕೆಲ್, ಹೊಸ ಪ್ರಾಜೆಕ್ಟ್‍ನಲ್ಲಿ ಬ್ಯುಸಿಯಾಗಿದ್ದಾನೆ. ಈ ಸಿನಿಮಾದಲ್ಲಿ ತನ್ನ ಮೊದಲ ಲುಕ್‍ನನ್ನು ಟೈಗರ್ ಖುಷಿಯಿಂದ ಹಂಚಿಕೊಂಡಿದ್ದಾನೆ. ಅಲ್ಲದೇ ತನ್ನ ನೆಚ್ಚಿನ ಡ್ಯಾನ್ಸಿಂಗ್ ಐಕಾನ್‍ಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾನೆ. ಮುನ್ನಾ ಮೈಕೆಲ್‍ನಲ್ಲಿ ಟೈಗರ್ ಶ್ರಾಫ್‍ದು ಮೈಕೆಲ್ ಜಾಕ್ಸನ್‍ನ ಕಟ್ಟಾ ಅಭಿಮಾನಿಯ ಪಾತ್ರ.

ಮುಂಬೈನ ಬೀದಿಯಲ್ಲಿ ಬೆಳೆಯುವ ಮುನ್ನಾ ಎಂಬ ಯುವಕ ಹೇಗೆ ಖ್ಯಾತ ನೃತ್ಯತಾರೆ ಆಗುತ್ತಾನೆ ಎಂಬುದು ಈ ಸಿನಿಮಾದ ಒನ್‍ಲೈನ್ ಸ್ಟೋರಿ. ಅದಕ್ಕಾಗಿ ಟೈಗರ್ ತಯಾರಿ ನಡೆಸುತ್ತಿದ್ದಾನೆ. ವಾಣಿಜ್ಯ ನಗರಿಯಲ್ಲಿ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶಬ್ಬೀರ್ ಖಾನ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಮೂಲಕ ನಿಧಿ ಅಗರ್‍ವಾಲ್ ಎಂಬ ಬೆಡಗಿ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾಳೆ.ಥ್ರಿಲ್ಲರ್ ಸಿನಿಮಾಗಳಲ್ಲಿ ಟೈಗರ್‍ನನ್ನು ನೋಡಿದ್ದ ಅಭಿಮಾನಿಗಳು ಡ್ಯಾನ್ಸ್ ಡ್ರಾಮಾದಲ್ಲಿ ಆತನ ಸ್ಟೆಪ್‍ಗಳನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಮುನ್ನಾ ಮೈಕೆಲ್ ಮುಂದಿನ ವರ್ಷ ತೆರೆಕಾಣಲಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin