ಟೈಗರ್ ಶ್ರಾಫ್ ‘ಸ್ಟುಡೆಂಟ್ ಆಫ್ ದಿ ಇಯರ್’
ಬಾಲಿವುಡ್ ನ ಭರವಸೆಯ ನಟ ಟೈಗರ್ ಶ್ರಾಫ್ ಈಗ ‘ಸ್ಟುಡೆಂಟ್ ಆಫ್ ದಿ ಇಯರ್’! ಈಗಾಗಲೇ ಉತ್ತಮ ವಿದ್ಯಾರ್ಥಿಯಾಗಿ ಮೊದಲ ಭಾಗದಲ್ಲಿ ಹೆಸರು ಮಾಡಿರೋ ಟೈಗರ್ ಎರಡನೇ ಸರಣಿಗೂ ಸಿದ್ಧನಾಗಿದ್ದಾನೆ. ‘ಸ್ಟುಡೆಂಟ್ ಆಫ್ ದಿ ಇಯರ್-2’ ಚಿತ್ರದಲ್ಲಿ ಟೈಗರ್ ನಟಿಸುತ್ತಿರುವುದನ್ನು ಚಿತ್ರ ನಿರ್ಮಾಪಕ ಕರಣ್ ಜೋಹರ್ ಬಹಿರಂಗಗೊಳಿಸಿದ್ದಾರೆ. 2012ರಲ್ಲಿ ತೆರೆ ಕಂಡಿದ್ದ ಮೊದಲಭಾಗ ಸೂಪರ್ಹಿಟ್ ಆಗಿತ್ತು. ಆ ಚಿತ್ರದಲ್ಲಿ ವರುಣ್ ಧವನ್, ಸಿದ್ಧಾರ್ಥ ಮಲ್ಹೋತ್ರಾ ಮತ್ತು ಅಲಿಯಾ ಭಟ್ ನಟಿಸಿದರು. ಎರಡನೇ ಭಾಗಕ್ಕೆ ಬಾಲಿವುಡ್ನ ಹಿರಿಯ ನಟ ಜಾಕಿ ಶ್ರಾಫ್ ಪುತ್ರ ಟೈಗರ್ನನ್ನು ಕರಣ್ ಆಯ್ಕೆ ಮಾಡಿದ್ದಾರೆ. ಹೊಸ ಸಿನಿಮಾದ ನಾಯಕಿ ಇನ್ನೂ ನಿಕ್ಕಿ ಆಗಿಲ್ಲ. ‘ಐ ಹೇಟ್ ಲವ್ ಸ್ಟೋರೀಸ್’ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದ ಪುನೀತ್ ಮಲ್ಹೋತ್ರಾ, ಹೊಸ ಪ್ರಾಜೆಕ್ಟ್ನ ಡೈರೆಕ್ಟರ್. ಎರಡನೇ ಸರಣಿ ‘ಎಸ್ಒಟಿವೈ-2’ ಟ್ರಯಾಂಗಲ್ ಲವ್ ಸ್ಟೋರಿಯಂತೆ. ಚಿತ್ರದ ಕಥೆ ಬಗ್ಗೆ ಡೈರೆಕ್ಟರ್ ಗುಟ್ಟು ಬಿಟ್ಟುಕೊಟ್ಟಿಲ್ಲ.
► Follow us on – Facebook / Twitter / Google+