ಟೈಮ್ಸ್ ಸೆಲೆಬೆಕ್ಸ್ ಚಾರ್ಟ್‍ನಲ್ಲಿ ಸೋನಾಕ್ಷಿ ಸಿನ್ಹಾ ಟಾಪ್‍

ಈ ಸುದ್ದಿಯನ್ನು ಶೇರ್ ಮಾಡಿ

Sonakshi

ಬಾಲಿವುಡ್ ಬೆಣ್ಣೆ ಮುದ್ದೆ ಸೋನಾಕ್ಷಿ ಸಿನ್ಹಾ ಜನಪ್ರಿಯತೆ ಕಡಿಮೆಯಾಗಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಇತ್ತೀಚಿನ ಟೈಮ್ಸ್ ಸೆಲೆಬೆಕ್ಸ್
ಚಾರ್ಟ್‍ನಲ್ಲಿ ಸೋನು (ನಟಿ ಪಟ್ಟಿ) ಟಾಪ್‍ನಲ್ಲಿದ್ದಾಳೆ. ನಟರ ವಿಭಾಗದಲ್ಲಿ ಬಿಗ್ ಬಿ ಮೊದಲ ಸಾಲಿನಲ್ಲಿದ್ದಾರೆ.  ಎಸ್‍ಆರ್‍ಎಂ ಯೂನಿವರ್ಸಿಟಿ ಪ್ರಾಯೋಜಕತ್ವದ ಟೈಮ್ಸ್ ಸೆಲೆಬೆಕ್ಸ್‍ನ ಏಪ್ರಿಲ್ 2017ರ ಪ್ಯಾಪ್ಯೂಲಾರಿಟಿ ರ್ಯಾಂಕಿಂಗ್‍ನಲ್ಲಿ ಇವರಿಬ್ಬರು ಅಗ್ರಸ್ಥಾನದಲ್ಲಿದ್ದಾರೆ. ನೂರ್ ಚಿತ್ರದ ಜನಪ್ರಿಯತೆಯಿಂದಾಗಿ ಸೋನು ಹಾಗೂ ಸರ್ಕಾರ್-3 ಸಿನಿಮಾದಿಂದ ಬಚ್ಚನ್‍ಗೆ ಈ ಸ್ಥಾನ ಲಭಿಸಿದೆ. ಸೋನು ನಂತರದ ಕ್ರಮಾಂಕದಲ್ಲಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ,  ಜಾಕ್ವಿಲಿನ್ ಫರ್ನಾಂಡಿಸ್ ಮತ್ತು ಸೋನಂ ಕಪೂರ್ ಕ್ರಮವಾಗಿ 2,3,4 ಮತ್ತು 5ನೇ ಸ್ಥಾನದಲ್ಲಿದ್ದಾರೆ.ನಟರ ಪಟ್ಟಿಯಲ್ಲಿ ಬಚ್ಚನ್ ಕೆಳಗೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸ್ಥಾನ ಪಡೆದಿದ್ದಾರೆ. ಬಾಹುಬಲಿ-2 ಖ್ಯಾತಿ ರಾಣಾ ದಗ್ಗುಬಾಟಿ 18ರಿಂದ 9ನೇ ಸ್ಥಾನಕ್ಕೆ ಏರಿದ್ದಾರೆ.   ಟೈಮ್ ಸೆಲೆಬೆಕ್ಸ್ ಮಾಸಿಕ ರೇಟಿಂಗ್ ಸೂಚ್ಯಂಕವಾಗಿದ್ದು, ಬಾಕ್ಸ್ ಆಫೀಸ್ ಸಾಧನೆ, ಮುದ್ರಣ, ಟಿವಿ ಮತ್ತು ಆನ್‍ಲೈನ್‍ನಲ್ಲಿ ಸದಾ ಸುದ್ದಿಯಲ್ಲಿರುವಿಕೆ, ಬ್ರಾಂಡ್ ಜÁಹೀರಾತುಗಳು, ಇಂಟರ್‍ನೆಟ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಜನಪ್ರಿಯತೆ-ಈ ಮಾನದಂಡಗಳ ಮೇಲೆ ನಟ-ನಟಿಯರ ಪಾಪ್ಯುಲಾರಿಟಿಯನ್ನು ನಿರ್ಧರಿಸಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin