ಟೈಮ್ಸ್ ಸೆಲೆಬೆಕ್ಸ್ ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಂ.1

ಈ ಸುದ್ದಿಯನ್ನು ಶೇರ್ ಮಾಡಿ

Ameer-khan

ಹಿಂದಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿರುವ ದಂಗಲ್ ಚಿತ್ರದ ಮೂಲಕ ಮತ್ತೊಮ್ಮೆ ಜನಪ್ರಿಯತೆಯ ಉತ್ತುಂಗದಲ್ಲಿರುವ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಟೈಮ್ಸ್ ಸೆಲೆಬೆಕ್ಸ್ ಮಾಸಿಕ ರೇಟಿಂಗ್‍ನಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ. ಡಿಸೆಂಬರ್ 2016ರ ನೋಯ್ಡಾ ಇನ್ಸ್‍ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪ್ರಸ್ತುತಪಡಿಸುತ್ತವೆ ಟೈಮ್ ಸೆಲೆಬೆಕ್ಸ್‍ನ ಮಂಥ್ಲಿ ರೇಟಿಂಗ್‍ನಲ್ಲಿ ಅಮೀರ್ ಜೊತೆ ನಂ.1 ಶ್ರೇಣಿ ಹಂಚಿಕೊಂಡ ಮತ್ತೊಬ್ಬ ತಾರೆ ದೀಪಿಕಾ ಪಡುಕೋಣೆ.

ಡಿಸೆಂಬರ್ 2016ರಲ್ಲಿ ಗಮನಸೆಳೆದ ಸಾಧನೆ ಮಾಡಿ ದವರೆಂದರೆ ರಣದೀಪ್ ಹೂಡಾ, ರಣವೀರ್ ಸಿಂಗ್, ರಜನಿಕಾಂತ್. ಟೈಮ್ ಸೆಲೆಬೆಕ್ಸ್ ಮಾಸಿಕ ಶ್ರೇಣಿಯನ್ನು 2012ರಿಂದ ಆರಂಭಿಸಲಾಗಿದೆ. ಈ ಶ್ರೇಣಿ ನೀಡಲು ಹಲವಾರು ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ತಾರೆಯ ಬಾಕ್ಸ್ ಆಫೀಸ್ ಸಾಧನೆ, ಸಮೂಹ ಮಾಧ್ಯಮಗಳಲ್ಲಿ ಅವರು ಸುದ್ದಿಯಲ್ಲಿರು ವಿಕೆ, ಅವರ ಬ್ರಾಂಡ್ ಪ್ರಚಾರ, ಇಂಟರ್ ನೆಟ್ ಮತ್ತು ಸಾಮಾಜಿಕ ಜಲತಾಣಗಳಲ್ಲಿ ಅಭಿಮಾನಿಗಳ ನಡುವೆ ಅವರ ಜನಪ್ರಿಯತೆ ಮೊದಲಾದ ಅಳತೆಗೋಲುಗಳಿಂದ ಖ್ಯಾತನಾಮರ ಶ್ರೇಣಿ ನಿರ್ಧರಿಸಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin