ಟೋಕಿಯೊ ಗೇಮ್ ಶೋನಲ್ಲಿ ನವಲೋಕ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

am,az

ತಂತ್ರಜ್ಞಾನಗಳು ವೃದ್ಧಿಯಾದಂತೆಲ್ಲ ಹೊಸ ಹೊಸ ಗೇಮ್‍ಗಳೂ ಪರಿಚಯವಾಗುತ್ತಿದೆ. ಜಪಾನ್‍ನಲ್ಲಿ ನಡೆದ 20ನೇ ವಾರ್ಷಿಕ ಟೋಕಿಯೋ ಗೇಮ್ ಶೋನಲ್ಲಿ ಆಧುನಿಕ ತಂತ್ರಜ್ಞಾನ ಗಳನ್ನು ಸಾವಿರಾರು ಮಂದಿ ವೀಕ್ಷಿಸಿ ಬೆರಗಾದರು. ಇದು ಗೇಮ್ ಯುಗ. ಅದರಲ್ಲೂ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದ ಕ್ರಾಂತಿ ಉದ್ಯಮದಲ್ಲಿ ಸಂಚಲನ ಮೂಡಿಸುತ್ತಿದೆ. ಉದಯರವಿ ನಾಡಿನ ವಾರ್ಷಿಕ ಟೋಕಿಯೋ ಗೇಮ್ ಶೋ ಇದಕ್ಕೆ ಸಾಕ್ಷಿಯಾಗಿತ್ತು. ಕಂಪ್ಯೂಟರ್ ಗೇಮ್ ಮತ್ತು ಹಾರ್ಡ್ ವೇರ್‍ಗಳ ಹೊಸ ಲೋಕವೇ ಇಲ್ಲಿ ಮೇಳೈಸಿತ್ತು. ಹೊಸ ತಲೆಮಾರಿಗೆ ಕಂಪ್ಯೂಟರ್ ಗೇಮ್ ಹುಚ್ಚು ಹಿಡಿಸಿರುವ ವರ್ಚುಯಲ್ ರಿಯಾಲಿಟಿ-ವಿಆರ್ ಊಹೆಗೂ ನಿಲುಕದ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಮುಂಚೂಣಿಯಲ್ಲಿದೆ.

ಗೇಮ್ ಪ್ರಿಯರಿಗೆ ಹೊಸ ಅನುಭವದ ಥ್ರಿಲ್ ನೀಡುತ್ತಿದೆ.  ಒಕುಲುಸ್ ಮತ್ತು ಎಚ್‍ಟಿಸಿಯಂಥ ಪ್ರಸಿದ್ಧ ಕಂಪನಿಗಳು ಕಂಪ್ಯೂಟರ್ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಹೆಡ್‍ಸೆಟ್‍ಗಳು ಮತ್ತು ಕಂಟ್ರೋಲರ್‍ಗಳನ್ನು ಅಭಿವೃದ್ದಿಗೊಳಿಸಿವೆ. ಅಲ್ಲದೇ ಗೇಮರ್‍ಗಳ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಆಧುನಿಕ ಗೇಮ್‍ಗಳನ್ನು ಮೇಲ್ದರ್ಜೆಗೇರಿಸುತ್ತಿವೆ.

ಕಂಪ್ಯೂಟರ್ ಗೇಮ್‍ನ ಇನ್ನೊಂದು ವಿಸ್ಮಯ ಪ್ಲೇಸ್ಟೇಷನ್ ವಿಆರ್. ಸುಧಾರಿತ ತಾಂತ್ರಿಕತೆಯ ಹೊಸ ಪ್ಲೇಸ್ಟೇಷನ್ ಅಕ್ಟೋಬರ್‍ನಲ್ಲಿ ಬಿಡುಗಡೆಗೆ ಸಜ್ಜಾಗಿದೆ . 20ನೇ ವಾರ್ಷಿಕ ಟೋಕಿಯೋ ಗೇಮ್ ಶೋನಲ್ಲಿ 500ಕ್ಕೂ ಹೆಚ್ಚು ಗೇಮ್ ಕಂಪನಿಗಳು ಭಾಗವಹಿಸಿದ್ದವು. ಅನೇಕಾನೇಕ ನವನವೀನ ಗೇಮ್‍ಗಳು ಮತ್ತು ಹಾರ್ಡ್‍ವೇರ್‍ಗಳು ಗೇಮ್ ಪ್ರಿಯರನ್ನು ಬಹುವಾಗಿ ಆಕರ್ಷಿಸಿತು..

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin