ಟೋಲ್‍ಗಳಲ್ಲಿ 500, 1000ರೂ. ನೋಟುಗಳನ್ನು ಸ್ವೀಕರಿಸುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Toll-03

ಬೆಂಗಳೂರು, ನ.9- ಹೆದ್ದಾರಿ ಟೋಲ್‍ಗಳಲ್ಲಿ ನವೆಂಬರ್ 11ರ ವರೆಗೆ 500, 1000ರೂ. ನೋಟುಗಳನ್ನು ಸ್ವೀಕರಿಸಬಹುದಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.
ನಿನ್ನೆ ರಾತ್ರಿ 500, 1000ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆ ಹೆದ್ದಾರಿಗಳಲ್ಲಿ ಸಾಕಷ್ಟು ಚಿಲ್ಲರೆ ಸಮಸ್ಯೆ ಉಂಟಾಗಿತ್ತು.
500, 1000ರೂ.ನೋಟುಗಳನ್ನು ಸ್ವೀಕರಿಸಬೇಕೆ ಎಂಬ ಗೊಂದಲ ಸಿಬ್ಬಂದಿಗಳಲ್ಲಿ ಎದುರಾಗಿತ್ತು. ಗೊಂದಲ ನಿವಾರಿಸಿರುವ ಹೆದ್ದಾರಿ ಪ್ರಾಧಿಕಾರ ನ.11ರ ವರೆಗೆ ಈ ನೋಟುಗಳನ್ನು ಗ್ರಾಹಕರಿಂದ ಸ್ವೀಕರಿಸಬಹುದು ಎಂದು ಸೂಚಿಸಿದೆ.

ಬೆಳಗ್ಗೆ ಹಲವು ಹೆದ್ದಾರಿಗಳಲ್ಲಿ ಚಿಲ್ಲರೆ ಸಮಸ್ಯೆ ಉಂಟಾಗಿ ಕಿಲೋ ಮೀಟರ್‍ಗಟ್ಟಲೆ ವಾಹನಗಳು ನಿಂತಿದ್ದವು. ಕೆಲವೆಡೆ ಕಿರಿಕಿರಿ ಹೆಚ್ಚಾಗಿ ಉಚಿತವಾಗಿ ವಾಹನಗಳನ್ನು ಬಿಡಲಾಗುತ್ತಿತ್ತು.
ಕೋಟ್ಯಂತರ ರೂ. ವಹಿವಾಟು ನಡೆಯುವ ಹೆದ್ದಾರಿಗಳಿಂದ ನಷ್ಟ ಉಂಟಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಿಷೇಧಿತ 500, 1000ರೂ. ನೋಟುಗಳನ್ನು ನ.11ರ ವರೆಗೆ ಸ್ವೀಕರಿಸಿ ಬ್ಯಾಂಕ್‍ಗೆ ಜಮಾ ಮಾಡುವಂತೆ ಪ್ರಾಧಿಕಾರ ಹೇಳಿದೆ.

► Follow us on –  Facebook / Twitter  / Google+

Facebook Comments

Sri Raghav

Admin