ಟೋಲ್ ದರ ಏರಿಕೆಗೆ ವ್ಯಾಪಕ ಆಕ್ರೋಶ
ಬೆಂಗಳೂರು, ಜು.6- ಒಂದೆಡೆ ಜಿಎಸ್ಟಿಯಿಂದ ಜನರಲ್ಲಿ ಗೊಂದಲ ಮೂಡಿದೆ. ಇದರ ಮಧ್ಯೆ ಇದೀಗ ಹೆದ್ದಾರಿಗಳ ಟೋಲ್ ದರ ಏರಿಕೆಯಾಗಿದೆ. ಟೋಲ್ಗಳ ಬೆಲೆ ಏರಿಕೆಗೆ ಸವಾರರು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನೈಸ್ ರಸ್ತೆಯ ಟೋಲ್ ದರ ಏರಿಕೆ ಅನಿವಾರ್ಯವಾಗಿದ್ದರಿಂದ ಶೇ.20 ರಷ್ಟು ಹೆಚ್ಚಳ ಮಾಡಲಾಗಿದೆ. ನಿಗದಿತಗಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ನೈಸ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟೋಲ್ ದರ ಏರಿಕೆಯನ್ನು ಸಮರ್ಥಿಸಿ ಕೊಂಡ ನೈಸ್ ಸಂಸ್ಥೆಯ ಅಧಿಕಾರಿಗಳು ,ಕಳೆದ ನಾಲ್ಕು ವರ್ಷಗಳಿಂದ ಟೋಲ್ ದರದಲ್ಲಿ ಏರಿಕೆ ಮಾಡಿರಲಿಲ್ಲ. ವಾರ್ಷಿಕ ಶೇ.10 ರಷ್ಟು ಎಂದಾದರೂ ಶೇ. 40 ರಷ್ಟು ದರ ಏರಿಕೆಯಾಗ ಬೇಕು. ಆದರೆ, ನಾವು ಕೇವಲ ಶೇ.20 ರಷ್ಟು ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕಾರು ದರವನ್ನು 26 ರೂ.ನಿಂದ 31 ರೂ.ಗೆ, ಬಸ್ ದರ 70 ರೂ.ನಿಂದ 84 ರೂ.ಗೆ, ಲಾರಿಗಳಿಗೆ 45 ರೂ. ಇದ್ದ ದರ 54 ರೂ.ಗೆ ಹಾಗೂ ದ್ವಿಚಕ್ರ ವಾಹನಗಳಿಗೆ ದರ 10 ರೂ.ನಿಂದ 12 ರೂ.ಗೆ ಹೆಚ್ಚಳವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಅತ್ತಿಬೆಲೆಯಲ್ಲಿರುವ ಬಿಇಟಿಎಲ್ ಟೋಲ್, ನೆಲಮಂಗಲದ ನವಯುಗ ಟೋಲ್ಗಳ ದರದಲ್ಲಿ ಶೇಕಡಾ 10ರಷ್ಟು ಹೆಚ್ಚಳವಾಗಿದೆ. ಜುಲೈ 1ರಿಂದಲೇ ಬಿಇಟಿಎಲ್ ಟೋಲ್ ದರದಲ್ಲಿ ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನ, ಕಾರುಗಳ ಟೋಲ್ ದರವನ್ನ ಹೆಚ್ಚಳ ಮಾಡಿಲ್ಲ. ಇದು ವಾಹನ ಮಾಲೀಕರಿಗೆ ಕೊಂಚ ರಿಲೀಫ್ ನೀಡಿದೆ. ಆದ್ರೆ ಟ್ರಕ್, ಬಸ್, ಮಲ್ಟಿ ಆಕ್ಸೆಲ್ ವಾಹನಗಳ ಟೋಲ್ ದರ 5 ರಿಂದ 10 ರೂಪಾಯಿ ವರಗೆ ಹೆಚ್ಚಳವಾಗಿದೆ. ಡೇ ಪಾಸ್ ವಾಹನಗಳ ಟೋಲ್? ದರ 15 ರೂಪಾಯಿ ಹೆಚ್ಚಳವಾಗಿದೆ.
ರಾಷ್ಟ್ರೀಯ ಹೆದ್ದಾರಿ ಟೋಲ್ಗಳು ಕೊಂಚ ಶಾಕ್ ನೀಡಿದರೆ, ನೈಸ್ ಮಾತ್ರ ವಾಹನ ಸವಾರರಿಂದ ನೈಸಾಗೆ ಹಣ ಕೀಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ಗಳು 10ರಷ್ಟು ದರ ಹೆಚ್ಚಿಸಿದರೆ, ನೈಸ್ ಟೋಲ್ 20 ರಷ್ಟು ದರ ಹೆಚ್ಚಿಸಿದೆ. ನೈಸ್ ಸವಾರಿ ದುಬಾರಿ:ನೈಸ್ ರಸ್ತೆಯ ಟೋಲ್ ದರದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಕ್ಲೋವರ್ ಲೀಫ್ ರಸ್ತೆ ವರೆಗೆ ಕಾರಿಗೆ 15 ರೂ. ಇದ್ದರೆ. ಕನಕಪುರ ರಸ್ತೆವರೆಗೆ 35 ರೂ. ಬನ್ನೇರು ಘಟ್ಟದವರೆಗೆ 65 ರೂಪಾಯಿ. ಹೊಸೂರು ರಸ್ತೆಗೆ 105 ರೂ. ಲಿಂಕ್ ರಸ್ತೆಗೆ 60 ರೂಪಾಯಿ ಇದೆ.
ಇನ್ನೂ ಬಸ್ಗಳಿಗೆ ನೋಡೋವುದಾದ್ರೆ, ಕ್ಲೋವರ್ ಲೀಫ್ಗೆ 45 ರೂ. ಕನಕಪುರ ರಸ್ತೆಗೆ 100 ರೂ. ಬನ್ನೇರುಘಟ್ಟಕ್ಕೆ 185 ರೂ. ಹೊಸೂರು ರಸ್ತೆಗೆ 290 ರೂ. ಲಿಂಕ್ ರಸ್ತೆಗೆ 155 ರೂ. ಇದೆ. ಇನ್ನೂ ಟ್ರಕ್ಗಳ ಟೋಲ್ ಕ್ಲೋವರ್ ಲೀಫ್ಗೆ 30 ರೂ. ಕನಕಪುರ ರಸ್ತೆಗೆ 65 ರೂ. ಬನ್ನೇರುಘಟ್ಟಕ್ಕೆ 120 ರೂ. ಹೊಸೂರು ರಸ್ತೆಗೆ 190 ರೂ. ಲಿಂಕ್ ರಸ್ತೆಗೆ 105 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನೂ ದ್ವಿಚಕ್ರ ವಾಹನಗಳ ಟೋಲ್ ಕೂಡ ದುಪ್ಪಟ್ಟಾಗಿದೆ. ಕ್ಲೋವರ್ ಲೀಫ್ಗೆ 6 ರೂ. ಕನಕಪುರ ರಸ್ತೆಗೆ 13 ರೂ. ಬನ್ನೇರುಘಟ್ಟಕ್ಕೆ 23 ರೂ. ಹೊಸೂರು ರಸ್ತೆಗೆ 38 ರೂ. ಲಿಂಕ್ ರಸ್ತೆಗೆ 25 ರೂಪಾಯಿ ಫಿಕ್ಸ್ ಮಾಡಲಾಗಿದೆ.
ಈಗಿರುವ ಟೋಲ್ ದರವೇ ಹೆಚ್ಚು.. ಅದರಲ್ಲಿ ಮತ್ತಷ್ಟು ಏರಿಕೆ ಮಾಡಿರುವುದಕ್ಕೆ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜನ ಜಿಎಸ್ಟಿಯಿಂದಾಗಿ ಟೋಲ್ ದರ ಹೆಚ್ಚಳವಾಗಿದೆ ಎಂದು ಸರ್ಕಾರದ ವಿರುದ್ದ ಹಿಡಿಶಾಪ ಹಾಕ್ತಿದ್ರೆ, ಇತ್ತ ಟೋಲ್ ಕಂಪನಿಗಳು ಪ್ರತಿವರ್ಷ ದರ ಏರಿಕೆ ಮಾಡುವಂತೆ ಈಗಲೂ ಮಾಡಲಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS