ಟ್ರಂಪ್ ಎಫೆಕ್ಟ್ : ಲಷ್ಕರ್-ಎ-ತೊಯ್ಬಾ ಮುಖಂಡ ಉಗ್ರ ಸಯೀದ್ ಹಫೀಜ್’ಗೆ ಗೃಹಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Hafeex-Syeed

ಇಸ್ಲಾಮಾಬಾದ್/ಲಾಹೋರ್, ಜ.31-ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆ ಮುಖಂಡ ಹಫೀಜ್ ಸಯೀದ್‍ನನ್ನು ಪಾಕಿಸ್ತಾನ ಸರ್ಕಾರ ಆರು ತಿಂಗಳ ಕಾಲ ಗೃಹಬಂಧನದಲ್ಲಿಟ್ಟಿದೆ. ಅಲ್ಲದೇ ಈತನೊಂದಿಗೆ ಇನ್ನೂ ನಾಲ್ವರು ಕುಖ್ಯಾತ ಭಯೋತ್ಪಾದಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮ ಕೈಗೊಂಡಿರುವುದರಿಂದ ಹಾಗೂ ಪಾಕಿಸ್ತಾನವನ್ನೂ ಪ್ರವೇಶ ನಿರ್ಬಂಧ ಪಟ್ಟಿಗೆ ಸೇರಿಸುವ ಸಾಧ್ಯತೆ ಇರುವುದರಿಂದ ಎಚ್ಚೆತ್ತ ಪಾಕಿಸ್ತಾನವು ಸಯೀದ್‍ನನ್ನು ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಯೀದ್ ಮುಖ್ಯಸ್ಥನೂ ಆಗಿರುವ ಜಮಾತ್-ಉದ್-ದವಾ ಉಗ್ರಗಾಮಿ ಸಂಘಟನೆ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳದ ಹೊರತು ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್ ಈ ಕ್ರಮ ಕೈಗೊಂಡಿದೆ.   ಫಲ್ಹಾ-ಎ-ಇನ್ಸಾನಿಯತ್ ಫೌಂಡೇಷನ್ ಮತ್ತು ಜಮಾತ್-ಉದ್-ದವಾ ವಿರುದ್ಧ ಕ್ರಮ ಕೈಗೊಳ್ಳಲು ಜ.27ರಂದು ಪಾಕಿಸ್ತಾನ ಗೃಹ ಸಚಿವಾಲಯದ ಆದೇಶದಂತೆ ಸಯೀದ್‍ನನ್ನು ಆರು ತಿಂಗಳ ಕಾಲ ಗೃಹಬಂಧನದಲ್ಲಿಡಲಾಗಿದೆ.

166 ಜನರನ್ನು ಬಲಿ ತೆಗೆದುಕೊಂಡ ಮುಂಬೈ 2008ರ ಭಯೋತ್ಪಾದಕರ ದಾಳಿಯಲ್ಲಿ ಸ ಯೀದ್ ಪ್ರಮುಖ ಪಾತ್ರ ವಹಿಸಿರುವ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರೂ ಕೆಲವು ವರ್ಷಗಳಿಂದ ಆತ ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದನು.  ಲಾಹೋರ್‍ನ ಚೌಬುರ್ಜಿ ಪ್ರದೇಶದಲ್ಲಿನ ಜಾಮಿಯಾ-ಅಲ್-ಖಾದ್‍ಸಿಯಾದಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು, ಫೈಸಲ್ ಪಟ್ಟಣದಲ್ಲಿರುವ ಆತನ ಮನೆಗೆ ಸ್ಥಳಾಂತರಿಸಿ ಬಂಧನದಲ್ಲಿ ಇಡಲಾಗಿದೆ. ಆತನೊಂದಿಗೆ ಅಬುಲ್ಲಾ ಉಬೈದ್, ಜಾಫರ್ ಇಕ್ಬಾಲ್, ಅಬ್ದುರ್ ರೆಹಮಾನ್ ಅಬಿದ್ ಮತ್ತು ಖಾಜಿ ಕಾಶಿಫ್ ನಿಯಾಜ್ ಎಂಬ ನಾಲ್ವರು ಕುಖ್ಯಾತ ಉಗ್ರರನ್ನೂ ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin