ಟ್ರಂಪ್-ಕ್ಸಿ ಭೇಟಿ ಬೆನ್ನಲ್ಲೇ ಉತ್ತರ ಕೊರಿಯಾಕ್ಕೆ ರಾಯಭಾರಿ ಕಳುಹಿಸಿದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

Trump--02

ಬೀಜಿಂಗ್, ನ. 15- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆ ವಿರುದ್ಧದ ಆಸಿಯನ್ ಸದಸ್ಯ ದೇಶಗಳ ಪ್ರವಾಸ ಮುಗಿಸಿದ ಬೆನ್ನಲ್ಲೇ ಚೀನಾ ಸರ್ಕಾರ ಆ ರಾಷ್ಟ್ರ(ಉತ್ತರ ಕೊರಿಯ)ಕ್ಕೆ ತನ್ನ ವಿಶೇಷ ರಾಯಭಾರಿಯನ್ನು ಕಳುಹಿಸಿಕೊಡಲು ತೀರ್ಮಾನಿಸಿದೆ. ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಪ್ರತಿನಿಧಿ ಸೊಂಗ್ ತಾವೊ ಅವರು ಶುಕ್ರವಾರ ಉತ್ತರ ಕೊರಿಯಕ್ಕೆ ತೆರಳಲಿದ್ದು, ಕಳೆದ ತಿಂಗಳು ಅಸ್ತಿತ್ವಕ್ಕೆ ಬಂದಿರುವ ಚೀನಾದ ಕಮ್ಯುನಿಸ್ಟ್ ಕಾಂಗ್ರೆಸ್ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಿರುವ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ, ಈ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐದು ಆಸಿಯಾ ಸದಸ್ಯ ರಾಷ್ಟ್ರಗಳ ಪ್ರವಾಸ ಅಂತ್ಯಗೊಂಡ ಒಂದೇ ದಿನದ ಅಂತರದಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ. ಟ್ರಂಪ್ ಅವರ ಐದು ದೇಶಗಳ ಪ್ರವಾಸದಲ್ಲಿ ಚೀನಾ ಕೂಡ ಸೇರಿತ್ತು. ತಮ್ಮ ಭೈೀಟಿ ವೇಳೆ ಟ್ರಂಪ್ ಅವರು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾನ್ ಉಂಗ್ ಅವರ ಹಠಮಾರಿತನದ ಧೋರಣೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀನಾದ ತಮ್ಮ ಸಹವರ್ತಿಯ ಮೇಲೆ ಒತ್ತಡ ಹೇರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin