ಟ್ರಂಪ್ ಗೆಲುವಿಗೆ ನೆರವಾಗಲು ಆದೇಶಿಸಿದ್ದ ಪುಟಿನ್ : ಅಮೆರಿಕ ಗುಪ್ತಚರ ದಳ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Trump

ವಾಷಿಂಗ್ಟನ್, ಜ.7-ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ನೆರವಾಗಲು ತಮ್ಮ ದೇಶದ ಸೈಬರ್ ಹ್ಯಾಕರ್‍ಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶ ನೀಡಿದ್ದರು ಎಂಬ ಸಂಗತಿಯನ್ನು ಅಮೆರಿಕ ಗುಪ್ತಚರ ದಳ ಬಹಿರಂಗಪಡಿಸಿದೆ. ಈ ಸಂಬಂಧ ಇಂಟೆಲಿಜೆನ್ಸ್ ಅಧಿಕಾರಿಗಳು ಸಲ್ಲಿಸಿರುವ ಹೊಸ ಕಡತದಲ್ಲಿ ದೃಢಪಡಿಸಲಾಗಿದೆ.
ಈ ಆರೋಪ ಹೊರಬೀಳುತ್ತಿದ್ದಂತೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಟ್ರಂಪ್ ಹೊಸ ಆಪಾದನೆಗಳನ್ನು ತಳ್ಳಿ ಹಾಕಿದ್ದಾರೆ. ರಷ್ಯಾ ಸೈಬರ್ ದಾಳಿಯಿಂದ ನವೆಂಬರ್ 8ರಂದು ನಡೆದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಲು ಹಾಗೂ ಡೆಮೊಕ್ರಾಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರಾಭವಗೊಳ್ಳಲು ಪ್ರಭಾವ ಬೀರುವಂಥ ಕಾರ್ಯಾಚರಣೆ ನಡೆಸುವಂತೆ ರಷ್ಯಾ ಅಧ್ಯಕ್ಷರು ಹೇಳಿಕೆ ನೀಡಿರುವ ಬಗ್ಗೆ ಮಾಹಿತಿ ಇದೆ. ಅದನ್ನು ಹೊಸ ಕಡತದಲ್ಲಿ ಮತ್ತೊಮ್ಮೆ ಖಚಿತಪಡಿಸಲಾಗಿದೆ ಎಂದು ನ್ಯಾಷನಲ್ ಇಂಟೆಲಿಜೆನ್ಸ್ ನಿರ್ದೇಶಕರು ವರದಿಯೊಂರದಲ್ಲಿ ತಿಳಿಸಿದ್ದಾರೆ.
ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದಕ್ಕೆ ಮುನ್ನವೇ ರಷ್ಯಾ ಸೈಬರ್ ದಾಳಿ ಪ್ರಕರಣ ಹಿಮಚೆಂಡಿನ ರೂಪ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಾದದ ದೊಡ್ಡ ಪರ್ವತವಾಗಿ ಅಪ್ಪಳಿಸಿ ರಾಜಕೀಯವಾಗಿ ಅಲ್ಲೋಲ-ಕಲ್ಲೋಲ ಮಾಡುವ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin