ಟ್ರಂಪ್ ಮುಸ್ಲಿಂ ವಿರೋಧಿ ನೀತಿಗೆ ವಿಶ್ವದಾದ್ಯಂತ ಭಾರೀ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Trump-Protest

ಕೈರೋ/ಟೆಹರಾನ್/ವಾಷಿಂಗ್ಟನ್, ಜ.29-ಅಮೆರಿಕ ಪ್ರವೇಶಿಸುವ ಏಳು ಮುಸ್ಲಿಂ ದೇಶಗಳ ಜನರ ಮೇಲೆ ಕಟ್ಟೆಚ್ಚರ ವಹಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಆದೇಶಕ್ಕೆ ವಿಶ್ವದ ವಿವಿಧ ದೇಶಗಳಲ್ಲಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಅಕ್ರೋಶದ ಬೆಂಕಿಗೆ ತುಪ್ಪ ಸುರಿಯುವಂತೆ ಇರಾಕ್, ಯಮೆನ್ ಮತ್ತು ಇರಾನ್ ಪ್ರಜೆಗಳು ಅಮೆರಿಕಕ್ಕೆ ಪ್ರಯಾಣಿಸುವುದನ್ನು ವಿದೇಶಿ ವಿಮಾನಯಾನ ಸಂಸ್ಥೆಗಳು ನಿರ್ಬಂಧಿಸುತ್ತಿವೆ. ಮಧ್ಯಪ್ರಾಚ್ಯ ದೇಶಗಳಿಂದ ಈಗಾಗಲೇ ಅಮೆರಿಕ ತಲುಪಿರುವ ಪ್ರಯಾಣಿಕರನ್ನು ವಿಮಾನನಿಲ್ದಾಣದಲ್ಲೇ ತಡೆಹಿಡಿಯಲಾಗಿದೆ.

ಮುಸ್ಲಿಂ ದೇಶಗ ಗ್ರೀನ್ ಕಾರ್ಡ್‍ದಾರರಿಗೂ ಈ ಆದೇಶ ಅನ್ವಯವಾಗುವುದರಿಂದ ಏರ್‍ಪೋ ರ್ಟ್‍ಗಳಲ್ಲಿ ಗೊಂದಲ ಮತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಐವರು ಇರಾಕ್ ಪ್ರಯಾಣಿಕರು ಮತ್ತು ಓರ್ವ ಯೆಮೆನ್ ಪ್ರಜೆ ಈಜಿಪ್ಟ್ ರಾಜಧಾನಿ ಕೈರೋದಿಂದ ನ್ಯೂಯಾರ್ಕ್‍ಗೆ ಹೋಗುವ ವಿಮಾನ ಏರುವುದನ್ನು ತಡೆಯಲಾಗಿದೆ. ಈ ಬೆಳವಣಿಗೆಯನ್ನು ಕೈರೋ ವಿಮಾನ ನಿಲ್ದಾಣದ ಮೂಲಗಳು ದೃಢಪಡಿಸಿವೆ.  ಈ ಆರು ಪ್ರಯಾಣಿಕರು ಸಕ್ರಮ ವಲಸೆ ವೀಸಾಗಳನ್ನು ಹೊಂದಿದ್ದರೂ, ಅವರು ಈಜಿಪ್ಟ್ ವಿಮಾನ ಏರುವುದನ್ನು ತಡೆಯಲಾಯಿತು.

Protest-Trum

ಇರಾನಿಯನ್ನರು ಅಮೆರಿಕಕ್ಕೆ ಹೋಗುವುದಕ್ಕೆ ಕೆಲವು ವಿಮಾನಯಾನ ಸಂಸ್ಥೆಗಳು ತಡೆಯೊಡ್ಡುತ್ತಿವೆ ಎಂದು ಟ್ರಾವೆಲ್ ಏಜೆಂಟರು ಆರೋಪಿಸಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಅಧಿಕೃತ ಕಾರ್ಯಗಳ ನಿಮಿತ್ತ ಅಮೆರಿಕಕ್ಕೆ ತೆರಳುವ ಮುಸ್ಲಿಂ ಪ್ರಜೆಗಳಿಗೂ ಟ್ರಂಪ್ ಆದೇಶದ ಬಿಸಿ ತಟ್ಟಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.  ವಿವಿಧ ದೇಶಗಳಿಂದ ಅಮೆರಿಕ ತಲುಪಿರುವ ಇರಾಕಿ ಪ್ರಯಾಣಿಕರನ್ನು ವಿವಿಧ ವಿಮಾನನಿಲ್ದಾಣಗಳಲ್ಲೇ ತಡೆಹಿಡಿಯಲಾಗಿದೆ. ಮಧ್ಯಪ್ರಾಚ್ಯದ ಕೆಲವು ಪ್ರಯಾಣಿಕರಿಗೆ ಏರ್‍ಪೋ ರ್ಟ್ ಸಿಬ್ಬಂದಿ ಸ್ವದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಅಧಿಕಾರಿಗಳು ಮತ್ತು ಪ್ರಯಾಣಿಕರಲ್ಲಿ ಭಾರೀ ವಾಗ್ವಾದ ನಡೆದು ಕೆಲಕಾಲದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಟ್ರಂಪ್ ಆದೇಶಕ್ಕೆ ಖಂಡನೆ : ಮುಂದಿನ ಆದೇಶವರೆಗೆ ಮುಸ್ಲಿಂ ನಿರಾಶ್ರಿತರಿಗೆ ಅಮೆರಿಕ ಪ್ರವೇಶ ನಿಷೇಧ ಕುರಿತ ಟ್ರಂಪ್ ಆದೇಶಕ್ಕೆ ವಿಶ್ವದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.
ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಟ್ರಂಪ್ ಆದೇಶಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಅಮೆರಿಕದಲ್ಲೂ ಆಕ್ಷೇಪ ವ್ಯಕ್ತವಾಗಿದ್ದು ಫೇಸ್‍ಬುಕ್ ಸಂಸ್ಥಾಪಕ ಝಕರ್‍ಬರ್ಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin