ಟ್ರಂಪ್ ವಲಸೆ ನೀತಿಗೂ, ಟೆಕ್ಕಿ ಹತ್ಯೆಗೂ ಸಂಬಂಧವಿಲ್ಲ : ಶ್ವೇತಭವನ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Indian-Kiled

ವಾಷಿಂಗ್ಟನ್, ಫೆ.25-ವಲಸಿಗರ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೂ ಮತ್ತು ಭಾರತೀಯ ಟೆಕ್ಕಿ ಹತ್ಯೆಗೆ ಕಾರಣವಾದ ಕನ್ಸಾಸ್ ಗುಂಡಿನ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಇವೆರಡರ ನಡುವೆ ಸಂಬಂಧ ಕಲ್ಪಿಸುವುದು ಆಧಾರರಹಿತವಾದುದು ಎಂದು ವೈಟ್‍ಹೌಸ್ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೆನ್ಸರ್ ಹೇಳಿದ್ದಾರೆ.   ಗುಂಡಿನ ದಾಳಿಯಲ್ಲಿ ಸಾವು-ನೋವಾಗಿರುವುದು ದುರಂತ. ಆದರೆ ಟ್ರಂಪ್‍ರ ವಲಸೆ ನೀತಿ ಮತ್ತು ಹತ್ಯೆಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಇದಕ್ಕಿಂತ ಹೆಚ್ಚಿಗೆ ವಿವರ ನೀಡಲು ನಾನು ಬಯಸುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ವೇಳೆ ಈ ಕೃತ್ಯವನ್ನು ಭಾರತೀಯ ಮೂಲದ ಅಮೆರಿಕ ಸಂಸದರು ತೀವ್ರವಾಗಿ ಖಂಡಿಸಿದ್ದಾರೆ. ಸೆನೆಟರ್‍ಗಳಾದ ಕಮಲಾ ಹ್ಯಾರಿಸ್ ಮತ್ತು ಪ್ರಮೀಳಾ ಜಯಪಾಲ್ ಅವರು ಈ ಘಟನೆಯಿಂದ ನಾವು ದಿಗ್ಭ್ರಾಂತರಾಗಿದ್ದೇವೆ. ಇಂಥ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಭಾರತೀಯರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಶ್ರೀನಿವಾಸ್ ಕುಟುಂಬಕ್ಕೆ 2 ಕೋಟಿ ರೂ. ಸಂಗ್ರಹ :  

ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಿದ್ದ ಹೈದರಾಬಾದ್ ಮೂಲದ ಶ್ರೀನಿವಾಸ್ ಕೊಚಿಭೋಟ್ಲಾ (32) ಹತ್ಯೆ ಪ್ರಕರಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಮಮ್ಮಲ ಮರುಗಿದ್ದಾರೆ. ಅವರ ಕುಟುಂಬಕ್ಕೆ ನೆರವಾಗಲು ಭಾರತೀಯರೆಲ್ಲರೂ ಸೇರಿ 2 ಕೋಟಿ ರೂ.ಗಳನ್ನು ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.   ಗುಂಡೇಟಿನಿಂದ ಹತರಾದ ಜೆಪಿಎಸ್ ತಯಾರಿಕಾ ಸಂಸ್ಥೆ ಉದ್ಯೋಗಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದ ಶ್ರೀನಿವಾಸ್ ಮತ್ತು ಗಾಯಗೊಂಡ ಅಲೋಕ್ ರೆಡ್ಡಿ ಮದಸಾನಿ ನವೋದ್ಯಮ ಆರಂಭಿಸುವ ಕನಸು ಹೊಂದಿದ್ದರು. ಕೊಚಿಭೋಟ್ಲಾ ಮತ್ತು ಮದಸಾನಿ ಎಂಬ ಸ್ಟಾರ್ಟ್-ಅಪ್ ಕಂಪನಿಗೆ ತಯಾರಿ ನಡೆಸುತ್ತಿರುವಾಗಲೇ ಆಡಮ್ ಎಂಬ ಹಂತಕ ಜನಾಂಗೀಯ ದ್ವೇಷಕ್ಕೆ ಶ್ರೀನಿವಾಸ್ ಬಲಿಯಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin