ಟ್ರಂಪ್ ವಿರುದ್ಧ ತಿರುಗಿಬಿದ್ದ 16 ಅಟಾರ್ನಿ ಜನರಲ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Trump-02

ವಾಷಿಂಗ್ಟನ್, ಫೆ.7-ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮತ್ತೊಂದು ಬಲವಾದ ಹೊಡೆತ ಬಿದ್ದಿದೆ. ಈ ವಿವಾದಿತ ವಲಸೆ ನಿಷೇಧ ಆದೇಶದ ವಿರುದ್ದ ಅಮೆರಿಕದ 16 ಅಟಾರ್ನಿ ಜನರಲ್‍ಗಳು ಕೈಜೋಡಿಸಿದ್ದಾರೆ. ಟ್ರಂಪ್‍ರ ಈ ಆದೇಶವು ತಾರತಮ್ಯದಿಂದ ಕೂಡಿದ್ದು, ಅಸಂವಿಧಾನಿಕ ಮತ್ತು ಅಮೆರಿಕನ್ನರಿಗೆ ವಿರುದ್ಧವಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸಲು ನಿರ್ಬಂಧ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು.

ಮುಸ್ಲಿಂ ಬಾಹುಳ್ಯವಿರುವ ರಾಷ್ಟ್ರಗಳ ನಾಗರಿಕರು ಅಮೆರಿಕ ಪ್ರವೇಶಿಸದಂತೆ ಹೇರಿದ್ದ ನಿಷೇಧವನ್ನು ಮತ್ತೆ ಜಾರಿಗೊಳಿಸಲು ಅವಕಾಶ ನೀಡುವಂತೆ ಕೋರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಟ್ರಂಪ್ ಆಡಳಿತಕ್ಕೆ ತೀವ್ರ ಮುಖಭಂಗವಾಗಿತ್ತು.  ಟ್ರಂಪ್ ಆಡಳಿತವು ಅಮೆರಿಕದ 9ನೇ ಸಕ್ರ್ಯೂಟ್ ಕೋರ್ಟ್ ಆಫ್ ಅಪೀಲ್ಸ್ (ಮೇಲ್ಮನವಿಗಳ ನ್ಯಾಯಾಲಯ) ಮುಂದೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಈಗ ಈ ಕಾರ್ಯಕಾರಿ ಆದೇಶದ ವಿರುದ್ಧ 12 ರಾಜ್ಯಗಳ ಅಟಾರ್ನಿ ಜನರಲ್‍ಗಳು ಅಮಿಕಸ್ ಕ್ಯೂರೆ ಸಲ್ಲಿಸಿ ಟ್ರಂಪ್‍ಗೆ ಸವಾಲೊಡ್ಡಿದ್ದಾರೆ.

ನಮ್ಮ ಸಮುದಾಯವನ್ನು ರಕ್ಷಿಸಲು, ನಮ್ಮ ಆರ್ಥಿಕತೆಯನ್ನು ಸುಭದ್ರಗೊಳಿಸಲು ಹಾಗೂ ಕಾನೂನನ್ನು ಎತ್ತಿಹಿಡಿಯಲು ನಾವೆಲ್ಲರೂ ಈ ಅರ್ಜಿಗಳನ್ನು ಸಲ್ಲಿಸಿದ್ದೇವೆ ಎಂದು ಪೆನ್ಸಿಲ್ವೇನಿಯಾ ಅಟಾರ್ನಿ ಜನರಲ್ ಜೋಶ್ ಶಾಪಿರೋ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin