ಟ್ರಕ್‍ನಲ್ಲಿ ಟ್ರಂಪ್ ಮಕ್ಕಳಾಟ : ಮುಸಿ ಮುಸಿ ನಕ್ಕ ಗಣ್ಯರು..! (Video)

ಈ ಸುದ್ದಿಯನ್ನು ಶೇರ್ ಮಾಡಿ

Trump-Drive

ವಾಷಿಂಗ್ಟನ್, ಮಾ.24-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಗಳ ಜೊತೆಗೆ ವಿಚಿತ್ರ ವರ್ತನೆ ಮತ್ತು ವಿಲಕ್ಷಣ ಹಾವ-ಭಾವಗಳಿಗೆ ಹೆಸರಾದವರು (ಕುಖ್ಯಾತಿ ಪಡೆದವರು ಎನ್ನಲಡ್ಡಿ ಇಲ್ಲ). ಇದನ್ನು ಸಾಬೀತು ಮಾಡುವ ಸಂಗತಿಯೊಂದು ನಿನ್ನೆ ವಾಷಿಂಗ್ಟನ್‍ನ ಶ್ವೇತಭವನದ ಬಳಿ ನಡೆದಿದೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಒಬಾಮ ಕೇರ್ ಆರೋಗ್ಯ ಸೇವಾ ಯೋಜನೆಯನ್ನು ಬದಲಿಸಿ ತಮ್ಮದೇ ಆದ ಆರೋಗ್ಯ ಆರೈಕೆ ಸುಧಾರಣೆ ಮಸೂದೆಗೆ ಬೆಂಬಲ ಪಡೆಯಲು ಶ್ವೇತಭವನದಲ್ಲಿ ಮಹತ್ವದ ಸಭೆಯೊಂದು ಆಯೋಜಿತವಾಗಿತ್ತು. ಆದರೆ ಅಲ್ಲಿಗೆ ತೆರಳುವ ಮಾರ್ಗದಲ್ಲಿ ವೈಟ್‍ಹೌಸ್ ಹೊರಗೆ ಟ್ರಕ್ ಚಾಲಕರನ್ನು ದಿಢೀರ್ ಭೇಟಿಯಾದ ಟ್ರಂಪ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಇದು ಪೂರ್ವನಿಯೋಜಿತ ಭೇಟಿ ಏನೆಲ್ಲ. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ದಿಢೀರನೇ ಟ್ರಕ್ ಒಳಗೆ ಏರಿದರು.

ಅತ್ಯಂತ ದುಬಾರಿ ಸೂಟ್ ಧರಿಸಿದ್ದ 70 ವರ್ಷದ ಟ್ರಂಪ್ ಕೊಳಕು ಟ್ರಕ್‍ನ ಸೀಟ್‍ನಲ್ಲಿ ಕುಳಿತವರೇ ಮಕ್ಕಳಂತೆ ಹಾರನ್ ಬಾರಿಸುತ್ತಾ, ಸ್ಟೇರಿಂಗ್ ಹಿಡಿದು ತಿರುಗಿಸುತ್ತಾ ವಾಹನ ಚಾಲನೆ ಮಾಡುತ್ತಿರುವಂತೆ ನಟಿಸಿದರು. ಅಲ್ಲದೇ ವ್ರೂಮ್ ಎಂದು ಶಬ್ಧ ಮಾಡಿದರು. ತುಂಟ ಮಕ್ಕಳ ಹಾಗೆ ಭಾವನೆಗಳನ್ನು ವ್ಯಕ್ತಪಡಿಸುವ ಮುಖಭಾವ ಪ್ರದರ್ಶಿಸಿ ಅಲ್ಲಿದ್ದ ಗಣ್ಯರೂ ಸೇರಿದಂತೆ ಟ್ರಕ್ ಚಾಲಕರಿಗೆ ಪುಕ್ಕಟ್ಟ ಮನರಂಜನೆ ನೀಡಿದರು.   ಅಮೆರಿಕ ಅಧ್ಯಕ್ಷರ ಈ ವಿಚಿತ್ರ ವರ್ತನೆಯಿಂದ ಭದ್ರತಾ ಸಿಬ್ಬಂದಿ ಕೆಲಕಾಲ ಗಲಿಬಿಲಿಗೆ ಒಳಗಾದರು. ನಂತರ ಟ್ರಕ್‍ನಿಂದ ಹೊರಗಿಳಿದರು.

ನಂತರ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನೀವೇನೇ ಹೇಳಿ ಅಮೆರಿಕಕ್ಕಿಂತ ಉತ್ತಮ ಟ್ರಕ್ ಚಾಲಕರು ಬೇರೆಲ್ಲೂ ಇಲ್ಲ. ಈ ವಿಷಯದಲ್ಲಿ ಅಮೆರಿಕಾಗೆ ಅಮೆರಿಕಾವೇ ಸಾಟಿ. ಪರ್ವತಗಳು, ಕಣಿವೆಗಳು-ಹೀಗೆ ಎಲ್ಲ ಕಡೆ ಟ್ರಕ್‍ಗಳನ್ನು ನೀವು ನೋಡಬಹುದು. ಹಳ್ಳ ಇರುವ ರಸ್ತೆಗಳನ್ನು ಸರಿಪಡಿಸುತ್ತೇನೆ ಎಂದು ಹೇಳಿ, ಗಂಭೀರವಾಗಿ ಶ್ವೇತಭವನದ ಕಡೆ ಹೆಜ್ಜೆ ಹಾಕಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin