ಟ್ರಾಫಿಕ್ ಠಾಣೆಗೆ ಅಧಿಕೃತ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

POILICE

ಚನ್ನಪಟ್ಟಣ, ಅ.19- ಜನಪ್ರತಿನಿಧಿಗಳ ನಿರುತ್ಸಾಹದಿಂದಾಗಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಟ್ರಾಫಿಕ್ ಠಾಣೆ ಮಂಜೂರಾತಿಗೆ ಸರ್ಕಾರ ಕೊನೆಗೂ ಅಸ್ತು ನೀಡಿದ್ದು, ಡಿಎಸ್‍ಪಿ ಆರ್.ಸಿ.ಲೋಕೇಶ್ ಅಧಿಕೃತ ಚಾಲನೆ ನೀಡಲಿದ್ದಾರೆ.ಈ ಠಾಣೆ ನಗರ ಠಾಣೆ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಿದ್ದು, 30 ಸಿಬ್ಬಂದಿ ಹೊಂದಿದ್ದು, ಟ್ರಾಫಿಕ್ ಸಮಸ್ಯೆಯನ್ನು ಆಳವಾಗಿ ಅರಿತಿರುವ ಇದೇ ತಾಲ್ಲೂಕಿನ ಹಲವಾರು ಠಾಣೆಗಳಲ್ಲಿ ಕಾನೂನು ಸುವ್ಯವಸ್ಥೆಯ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯ ವಸಂತಕುಮಾರ್ ಸಂಚಾರಿ ಠಾಣೆಯ ಪ್ರಪ್ರಥಮ ಪಿಎಸ್‍ಐ ಎಂಬ ಹೆಗ್ಗಳಿಕೆಯೊಂದಿಗೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಠಾಣೆ ಬಿಎಂ ಹೆದ್ದಾರಿಯಲ್ಲಿರುವುದರಿಂದ ಸಂಚಾರಿ ಠಾಣೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದಾಗ ಮಾತ್ರ ಈ ಆಶಿಸ್ತಿನ ಸವಾಲುಗಗಳನ್ನು ಎದುರಿಸಲು ಸಾಧ್ಯ. ಒಟ್ಟಾರೆ ತಮ್ಮೆದುರು ನಿಂತಿರುವ ಜನಹಿತದ ಸವಾಲುಗಳ ಗುಡ್ಡೆಯನ್ನು ಸಂಚಾರಿ ಪೊಲೀಸರು ಯಾವ ರೀತಿ ನಿಭಾಯಿಸಿ ಸಮಸ್ಯೆಮುಕ್ತ ಸಂಚಾರಿ ವ್ಯವಸ್ಥೆಯನ್ನು ಜಾರಿಗೊಳಿಸಬಲ್ಲರು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin