ಟ್ರಾಮ್ ರೈಲೊಂದು ಹಳಿ ತಪ್ಪಿ ಕನಿಷ್ಠ 7 ಮಂದಿ ಸಾವು, 50 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Train02

ಲಂಡನ್, ನ.10- ಟ್ರಾಮ್ ರೈಲೊಂದು ಹಳಿ ತಪ್ಪಿ ಕನಿಷ್ಠ ಏಳು ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಲಂಡನ್ ನಗರದಲ್ಲಿ ನಡೆದಿದೆ.
ಕ್ರೊಯ್‍ಡಾನ್ ಟ್ರಾಮ್‍ಲಿಂಕ್ ರೈಲು ಅಡಿಂಗ್ಟನ್‍ನಿಂದ ವಿಂಬಲ್ಡನ್‍ಗೆ ಚಲಿಸುತ್ತಿದ್ದಾಗ ಲಂಡನ್ ನಗರದ ಜಂಕ್ಷನ್ ಬಳಿ ತಿರುವಿನಲ್ಲಿ ಹಳಿ ತಪ್ಪಿ ಈ ದುರಂತ ಸಂಭವಿಸಿತು. ಅತಿ ವೇಗದಿಂದ ಟ್ರಾಮ್ ಹಳಿ ತಪ್ಪಿತು ಎಂದು ಬ್ರಿಟಿಷ್ ಸಂಚಾರಿ ಪೊಲೀಸರು ತಿಳಿಸಿದ್ದಾರೆ.  ಈ ದುರ್ಘಟನೆಯಲ್ಲಿ ಏಳು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಗಾಯಗೊಂಡ 50ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಾಮ್ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಕೆಲಕಾಲ ಇತರ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin