ಟ್ರಿಣ್.. ಟ್ರಿಣ್.. : ಮೈಸೂರಿನಲ್ಲಿ ಪ್ರವಾಸಿಗರಿಗೆ ಬಾಡಿಗೆ ಸೈಕಲ್ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cycle-Mysuru

ಮೈಸೂರು,ನ.2-ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಮುಂದಾಗಿರುವ ನಗರಪಾಲಿಕೆ ಪ್ರವಾಸಿಗರಿಗೆ ಸೈಕಲ್‍ಗಳನ್ನು ಬಾಡಿಗೆಗೆ ಕೊಡುವ ಮೂಲಕ ಪರಿಸರ ಸಂರಕ್ಷಣೆಯ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ.  ನರ್ಮ್ ಯೋಜನೆಯಡಿ ಸೈಕಲ್ ಬಾಡಿಗೆ ನೀಡುವ ಯೋಜನೆಯನ್ನು ಪಾಲಿಕೆ ಹೊಂದಿದ್ದು , ಇದರಿಂದ ಪರಿಸರ ರಕ್ಷಣೆ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಬೈರಪ್ಪ ತಿಳಿಸಿದರು.  ಅದರಂತೆ ಮೊದಲ ಹಂತದಲ್ಲಿ ಪಾಲಿಕೆ ವಲಯದಲ್ಲಿ ಈಗ 25 ಸೈಕಲ್‍ಗಳನ್ನು ಇಡಲಾಗಿದ್ದು , ಸದಸ್ಯರಿಗೆ 5 ರೂ. ಸದಸ್ಯರಲ್ಲದವರಿಗೆ 10 ರೂ.ಗೆ ಬಾಡಿಗೆ ಪಡೆಯಬಹುದಾಗಿದ್ದು , ನಗರದ 12 ಸ್ಥಳಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಸೈಕಲ್‍ಗಳನ್ನು ಪಡೆದು ಮುಂದಿನ ಬೇರೆ ಕೇಂದ್ರಗಳಲ್ಲಿ ಸೈಕಲ್‍ಗಳನ್ನು ಬಿಟ್ಟು ಹೋಗಬಹುದಾಗಿದೆ.

Cycle-Mysuru2

ನರ್ಮ್ ಯೋಜನೆಯಡಿ ಸೈಕಲ್ ಬಾಡಿಗೆ ಯೋಜನೆ ತರಲಾಗಿದ್ದು , ಸೈಕಲ್ ಮೇಲೆ ಲೊಗೋ ಹಾಕಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮೈಸೂರಿನಾದ್ಯಂತ 25 ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ತೆರೆಯಲಿದೆ. ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಹಾನಗರ ಪಾಲಿಕೆಯ 9 ವಲಯ ಕಚೇರಿಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಸಾರ್ವಜನಿಕರು ಈ ಸೈಕಲ್‍ನ್ನು ಪಡೆದು ಪರಿಸರ ಮಾಲಿನ್ಯ ಕಾಪಾಡುವುದರ ಮೂಲಕ ಟ್ರಾಫಿಕ್‍ಜಾಮ್‍ನ್ನು ತಪ್ಪಿಸಬಹುದು. ಉತ್ತಮ ಆರೋಗ್ಯವನ್ನು ಪಡೆಯಬಹುದು. ಜನರು ಈ ಯೋಜನೆಯನ್ನು ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ಮೇಯರ್ ಬೈರಪ್ಪ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin