ಟ್ರಿಪೋಲಿ ಏರ್‍ಪೋರ್ಟ್ ಮೇಲೆ ಉಗ್ರರ ದಾಳಿ : 20ಕ್ಕೂ ಹೆಚ್ಚು ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Tripoli--02
ಟ್ರಿಪೋಲಿ, ಜ.17-ಲಿಬಿಯಾದಲ್ಲಿ ಉಗ್ರಗಾಮಿಗಳ ಹಿಂಸಾಚಾರ ಮುಂದುವರಿದಿದೆ. ರಾಜಧಾನಿ ಟ್ರಿಪೋಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಲಿಬಿಯಾ ಪೂರ್ವ ಭಾಗದ ಹೊರವಲಯದಲ್ಲಿರುವ ಮಿಟಿಗಾ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ಉಗ್ರರ ದಾಳಿ ಮತ್ತು ಆನಂತರ ಭದ್ರತಾ ಪಡೆ ಜೊತೆ ನಡೆದ ಗುಂಡಿನ ಕಾಳಗದ ನಂತರ ಅಲ್ಲಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಗುಂಡಿನ ಚಕಮಕಿಯಲ್ಲಿ 70ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ರಾಜಧಾನಿಯ ಏಕೈಕ ಕಾರ್ಯನಿರತ ವಿಮಾಣ ನಿಲ್ದಾಣದಲ್ಲಿ ನಡೆದ ಈ ದಾಳಿಯಲ್ಲಿ ಆರು ವಿಮಾನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರಾಗೃಹದಲ್ಲಿ ಇರಿಸಲಾದ ತಮ್ಮ ಸಹಚರರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಉಗ್ರರು ಏರ್‍ಪೆÇೀರ್ಟ್ ಮೇಲೆ ದಾಳಿ ನಡೆಸಿದರು.

Facebook Comments

Sri Raghav

Admin