ಟ್ರೆಂಡ್ ಆಗುತ್ತಿದೆ ಭ್ರಮಾಲೋಕದ ದೃಶ್ಯ ಚಿತ್ರ ರಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

vr-6

ಇದು ಭ್ರಮಾಲೋಕ.. ಈ ಪ್ರಪಂಚದಲ್ಲಿ ಬಹುತೇಕ ಮಂದಿ ಭ್ರಮೆಯಲ್ಲಿಯೇ ಬದುಕುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಭ್ರಮೆ. ಜನರು ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಜಗತ್ತನ್ನು ನೋಡುತ್ತಾರೆ. ಕೆಲವರಿಗೆ ವಿಶಾಲವಾದ ಆಕಾಶ ನೀಲಿಯಾಗಿ ಮಾತ್ರ ಕಾಣುತ್ತದೆ. ಆದರೆ ವಾಸ್ತವವಾಗಿ ಬಾನಿನಲ್ಲಿ ಅನೇಕ ವರ್ಣಗಳಿವೆ. ಇಂಥ ಭ್ರಮೆಗಳನ್ನೇ ಬಂಡವಾಳವಾಗಿಟ್ಟಿಕೊಂಡು ವಿಸ್ಮಯಗೊಳಿಸುವ ಚಿತ್ರ ರಚಿಸುವುದರಲ್ಲಿ ದಕ್ಷಿಣ ಕೊರಿಯಾದ ಪ್ರಸಾಧನ(ಮೇಕಪ್) ಕಲಾವಿದೆ ಡೈನ್ ಯೂನ್ ಸಿದ್ಧಹಸ್ತಳು.

va
24 ವರ್ಷದ ಈಕೆ ವಿಷುವಲ್ ಇಲ್ಯೂಷನ್ ಆರ್ಟ್(ದೃಶ್ಯ ಭ್ರಮೆ ಚಿತ್ರರಚನೆ) ಕಲಾ ಪ್ರಕಾರದಲ್ಲಿ ಅಪಾರ ಪರಿಣಿತಿ ಪಡೆದಿದ್ದಾಳೆ. ಇಲ್ಲಿರುವ ಚಿತ್ರಗಳೇ ಅದಕ್ಕೆ ಸಾಕ್ಷಿ. ಫೇಸ್ ಪೇಟಿಂಗ್, ಬಾಡಿ ಆರ್ಟ್ ನಲ್ಲಿ ಈಕೆಯದು ಪಳಗಿದ ಕೈ.

vr-4
ಇವು ಗ್ರಾಫಿಕ್ ಕಲೆಯಲ್ಲ ಅಥವಾ ಕಂಪ್ಯೂಟರ್ ತಂತ್ರಜ್ಞಾನ ಚಿತ್ರಗಳಲ್ಲ. ಯೂನ್ ಕಲಾ ನೈಪುಣ್ಯದ ಕೈ ಚಳಕ. ಈ ಚಿತ್ರ ಗಳನ್ನು ಗಮನಿಸಿದರೆ ಒಂದು ಮುಖದಲ್ಲಿ ನಾಲ್ಕಾರು ಕಣ್ಣುಗಳು, ತುಟಿಗಳು, ಬೆರಳುಗಳು ಕಂಡು ಬರುತ್ತದೆ. ಇದರಲ್ಲಿ ನಿಜವಾದ ಅಂಗ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತದೆ.

va-1
ಫೇಸ್ ಪೇಟಿಂಗ್ ಮತ್ತು ಬಾಡಿ ಆರ್ಟ್‍ನಲ್ಲಿ ಈಕೆಯದು ಪಳಗಿದ ಕೈ. ಈಕೆ ಮುಖ ಮತ್ತು ದೇಹವನ್ನೇ ಕ್ಯಾನ್ವಾಸ್ ಮಾಡಿಕೊಳ್ಳುತ್ತಾನೆ. ಒಂದು ದೇಹದಲ್ಲಿ ಮೂರು ಮುಖಗಳು, ಒಂದು ಮುಖದಲ್ಲಿ ದ್ವಿವದನಗಳು ಹೀಗೆ ಭ್ರಮೆ ಹುಟ್ಟಿಸುವ ಚಿತ್ರಗಳನ್ನು ರಚಿಸಿ ಎಲ್ಲರನ್ನು ಬೆಕ್ಕಸಬೆರಗಾಗಿಸಿದ್ದಾಳೆ. ಈಕೆ ಕೈಯಿಂದ ಬರೆದಿರುವ ಚಿತ್ರಗಳನ್ನು ನೋಡಿ ಅನೇಕರು ಇಂದು ಗ್ರಾಫಿಕ್ ಆರ್ಟ್ ಎಂದೇ ಭಾವಿಸಿದ್ದರು. ಆನಂತರ ಇದು ವಿಷುವಲ್ ಆರ್ಟ್ ಎಂಬುದು ಗೊತ್ತಾದ ನಂತರ ಲೆಕ್ಕವಿಲ್ಲದಷ್ಟು ಮಂದಿ ಅಚ್ಚರಿ ಚಕಿತರಾಗಿದ್ದಾರೆ. ಇನ್ಸ್‍ಸ್ಟಾಗ್ರಾಂ ನಲ್ಲಿ ಚಿರಪರಿಚಿತಳಾಗಿರುವ ಡೈನ್ ಯೂನ್‍ಗೆ ಸೋಷಿಯಲ್ ಮೀಡಿಯಾದಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್‍ಗಳಿದ್ದಾರೆ.

vr-3

Facebook Comments

Sri Raghav

Admin