ಟ್ರೇಡ್ ಲೈಸೆನ್ಸ್ ಇಲ್ಲದ  ಜಿಮ್‍ಗೆ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.29- ಟ್ರೇಡ್ ಲೈಸೆನ್ಸ್ ಇಲ್ಲದೆ ನಡೆಸುತ್ತಿದ್ದ ಜಿಮ್‍ಗೆ ಬೀಗ ಜಡಿಯಲಾಗಿದೆ. ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿ ದವಳಗಿರಿ ನಿವಾಸದ ಬಳಿಯಿರುವ ಕಲ್ಟ್ ಫಿಟ್ ಫಿಟ್ನೆಸ್ ಸೆಂಟರ್‍ನ್ನು ಬಿಬಿಎಂಪಿ ಅಧಿಕಾರಿಗಳು ಕ್ಲೋಸ್ ಮಾಡಿದ್ದಾರೆ. ಮಧ್ಯರಾತ್ರಿಯ ತನಕ ಲೌಡ್‍ಸ್ಪೀಕರ್‍ಗಳಿಂದ ಮ್ಯೂಸಿಕ್ ಹಾಕಿಕೊಳ್ಳುತ್ತಿದ್ದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಹಾಗೂ ಟ್ರೇಡ್ ಲೈಸೆನ್ಸ್ ಇಲ್ಲದೆ ಜಿಮ್ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಜಿಮ್ ಕ್ಲೋಸ್ ಮಾಡಿಸಿದ್ದಾರೆ.

Facebook Comments