ಟ್ವಿಟ್ಟರ್ ನಲ್ಲಿ ಕನ್ನಡ ನಟಿಯ ಬೆತ್ತಲೆ ವಿಡಿಯೋ, ಬಿಸಿ ಬಿಸಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Sucgi--01

ಬೆಂಗಳೂರು, ಮಾ.5-ಖ್ಯಾತ ಗಾಯಕಿ ಸುಚಿತ್ರಾ ಕಾರ್ತಿಕ್ ಅವರ ಟ್ವೀಟ್‍ನಲ್ಲಿ ಬಹಿರಂಗಗೊಂಡಿರುವ ಫೋಟೋ, ವಿಡಿಯೋ ನನ್ನದಲ್ಲ ಎಂದು ಮಂಗಳೂರು ಮೂಲದ ತಮಿಳುನಟಿ ಸಂಜಿತಾ ಶೆಟ್ಟಿ ಸ್ಪಷ್ಟಪಡಿಸುತ್ತಿದ್ದಂತೆ ವಿತ್ ಪ್ರೂಫ್ ಎಂದು ಸುಚಿಲೀಕ್ಸ್‍ನಿಂದ ಮತ್ತೊಂದು ಟ್ವೀಟ್‍ನಲ್ಲಿ ಅಶ್ಲೀಲ ಚಿತ್ರವೊಂದು ಅಪ್‍ಡೇಟ್ ಆಗಿದೆ.  ಸುಚಿತ್ರಾ ಕಾರ್ತಿಕ್‍ನ ಟ್ವೀಟರ್‍ನಲ್ಲಿ ಬಹಿರಂಗೊಂಡಿರುವ ಸಂಚಿತಾ ಶೆಟ್ಟಿ ನಗ್ನ ವಿಡಿಯೋ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದರು. ಆ ದೃಶ್ಯದಲ್ಲಿರುವುದು ನಾನಲ್ಲ. ಈ ಬಗ್ಗೆ ದೂರು ನೀಡಲು ನಾನು ಮುಂದಾಗಿದ್ದು, ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ ಎಂದಿದ್ದರು.

 

Sucgi--01

ಈ ಬೆನ್ನಲ್ಲೇ ಟ್ವೀಟ್‍ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ವಿತ್ ಪ್ರೂಫ್ ಹೆಸರಲ್ಲಿ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.  ಮೊನ್ನೆಯಷ್ಟೆ ನಟ ಧನುಷ್, ನಟಿ ಹನ್ಸಿಕಾ ಮೊಟ್ವಾಣಿ ಜೊತೆಗಿರುವ ಚಿತ್ರ ಕೊಲವೆರಿಡಿ ಖ್ಯಾತಿಯ ಅನಿರುದ್ಧ್, ರವಿಚಂದ್ರನ್, ನಟಿ ಆ್ಯಂಡ್ರಿಯಾ ಜೊತೆ ಆತ್ಮೀಯ ಭಂಗಿಯಲ್ಲಿರುವ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳನ್ನು ಟ್ವೀಟರ್ ಅಕೌಂಟ್‍ನಲ್ಲಿ ಬಹಿರಂಗಗೊಳಿಸಿ ಕೆಲವೇ ಹೊತ್ತಿನಲ್ಲಿ ಡಿಲಿಟ್ ಮಾಡಿದ್ದಾರೆ.  ತಮ್ಮ ಒಂದು ಕಾಲದ ಆತ್ಮೀಯ ಸ್ನೇಹಿತರ ಜೊತೆ ಈಗ ವೈಷಮ್ಯ ಸಾಧಿಸುತ್ತಿರುವ ಸುಚಿತ್ರಾ ಖಾಸಗಿ ಪಾರ್ಟಿಯ ಚಿತ್ರಗಳನ್ನು ಬಹಿರಂಗಪಡಿಸುವ ಮೂಲಕ ಮಾನ ಕಳೆಯಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.  ಈ ಹಿಂದೆಯೂ ಕೆಲ ವೈಯಕ್ತಿಕ ಟ್ವೀಟ್‍ಗಳನ್ನು ಮಾಡಿದ್ದ ಇವರು, ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ನನ್ನ ಟ್ವೀಟ್ ಹ್ಯಾಕ್ ಮಾಡಲಾಗಿದೆ ಎಂದು ಸುಚಿತ್ರಾ ಕಾರ್ತಿಕ್ ಹೇಳುತ್ತಿದ್ದಾರೆ. ಅವರ ಪತಿ ಕಾರ್ತಿಕ್ ಆಗಿರುವ ಪ್ರಮಾದಕ್ಕೆ ಕ್ಷಮೆ ಯಾಚಿಸಿದ್ದು, ಯಾರೂ ಇದನ್ನು ವೈಯಕ್ತಿಕವಾಗಿ ಪರಿಗಣಿಸಬಾರದೆಂದು ಮನವಿ ಮಾಡಿದ್ದಾರೆ. ಈ ಎಲ್ಲದರ ನಡುವೆಯೇ ಮತ್ತೆ ಮತ್ತೆ ಟ್ವೀಟ್‍ಗಳಲ್ಲಿ ಟ್ವಿಸ್ಟ್‍ಗಳು ಸಿಗುತ್ತಿವೆ.

 

ಸುಚಿತ್ರಾ ಅವರ ಟ್ವೀಟರ್ ಖಾತೆಯಿಂದ ತಮಿಳು ಚಿತ್ರರಂಗದ ಪ್ರತಿಷ್ಠಿತ ನಟ-ನಟಿಯರ ಖಾಸಗಿ ಚಿತ್ರಗಳು ಬಹಿರಂಗಗೊಂಡಿದ್ದವು. ಇವರ ಟ್ವೀಟರ್ ಖಾತೆಯಲ್ಲದೆ, ಸುಚಿಲೀಕ್ಸ್ ಹೆಸರಿನ ಟ್ವೀಟರ್ ಖಾತೆಯಿಂದ ಅಶ್ಲೀಲ ಚಿತ್ರಗಳು, ವಿಡಿಯೋಗಳು ಟ್ವೀಟ್ ಆಗಿದ್ದವು.  ತಮಿಳುಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕನ್ನಡ ಮೂಲದ ನಟಿಯ ಅಶ್ಲೀಲ ವಿಡಿಯೋ ಕೂಡ ಟ್ವೀಟ್ ಆಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆಯನ್ನೂ ಕೂಡ ನೀಡಿದ್ದರು.  ಬಾಲಿವುಡ್‍ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಟ್ವೀಟರ್ ಕದನ ಕಾಲಿವುಡ್‍ಗೂ ವಿಸ್ತರಿಸಿದೆ.  ಇತ್ತೀಚೆಗೆ ಧನುಷ್ ವಿರುದ್ಧ ಎದ್ದಿರುವ ಹುಟ್ಟಿನ ವಿವಾದ ಪ್ರಕರಣ ಶಮನವಾಗುವ ಮುಂಚೆಯೇ ಟ್ವೀಟರ್‍ನಲ್ಲಿ ಗಾಯಕಿ ಸುಚಿತ್ರಾ ಸೃಷ್ಟಿಸಿರುವ ಬಾಂಬ್ ತಮಿಳುಚಿತ್ರರಂಗದಲ್ಲಿ ತಲ್ಲಣ ಮೂಡಿಸಿದೆ. ಅಲ್ಲದೆ ಸ್ಯಾಂಡಲ್‍ವುಡ್‍ನಲ್ಲೂ ಆತಂಕ ಸೃಷ್ಟಿಸಿದೆ.

ಸುಚಿತ್ರಾ ಅವರ ಟ್ವೀಟರ್‍ನಲ್ಲಿ ಕೇವಲ ತಮಿಳು ಚಿತ್ರರಂಗದ ಖ್ಯಾತ ನಟ-ನಟಿಯರ ಚಿತ್ರಗಳಲ್ಲದೆ, ಟಾಲಿವುಡ್ ಮತ್ತು ಚಂದನವನದ ನಟಿಯರ ಚಿತ್ರಗಳೂ ಕೂಡ ಅಪ್‍ಲೋಡ್ ಆಗಿದ್ದವು ಎಂಬುದು ಈಗ ಬೆಳಕಿಗೆ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin