ಟ್ವೆಂಟಿ-20ಯಲ್ಲಿ ಟಾಪ್ 1 ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ನ್ಯೂಜಿಲೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

India--02

ರಾಜ್‍ಕೋಟ್, ನ.4- ಏಕದಿನ ಸರಣಿಯನ್ನು ಸೋತು ಸೊರಗಿದ್ದ ಕೇನ್ ವಿಲಿಯಮ್ಸ್ ಬಳಗವು ಈಗ ಟ್ವೆಂಟಿ-20 ಸರಣಿಯನ್ನು ಕೈಚೆಲ್ಲುವ ಭೀತಿಗೆ ಒಳಗಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ವಿರೋಚಿತ ಸೋಲು ಕಂಡಿರುವ ನ್ಯೂಜಿಲೆಂಡ್ ಇಂದಿನ ಪಂದ್ಯವನ್ನು ಸೋತರೆ ಸರಣಿಯನ್ನು ಕೈಚೆಲ್ಲುವುದೇ ಅಲ್ಲದೆ ಟಾಪ್ 1 ಸ್ಥಾನದಿಂದ ಕುಸಿಯಬೇಕಾಗುತ್ತದೆ. ನವದೆಹಲಿಯಲ್ಲಿ ಪಂದ್ಯದಲ್ಲಿ ಫೀಲ್ಡಿಂಗ್ ವಿಭಾಗದ ವೈಫಲ್ಯದಿಂದಲೇ ನಾವು ಸೋಲು ಕಾಣಬೇಕಾಯಿತು, ನಮ್ಮ ಫೀಲ್ಡರ್‍ಗಳು ಬಿಟ್ಟ 3 ಕ್ಯಾಚ್‍ಗಳು ಭಾರತದ ಗೆಲುವಿಗೆ ನೆರವಾಯಿತು ಇಂದಿನ ಪಂದ್ಯದಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿಸಿಕೊಳ್ಳಲಿದ್ದೇವೆ ಎಂದು ನ್ಯೂಜಿಲೆಂಡ್‍ನ ನಾಯಕ ಕೇನ್‍ವಿಲಿಯಮ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನನ್ನ ಕ್ರಿಕೆಟ್ ಜೀವನವನ್ನು ಆರಂಭಿಸಿದ ತಾಯ್ನಾಡಿನ ಪಿಚ್‍ನಲ್ಲಿ ಆಡುತ್ತಿರುವುದು ನನಗೆ ಖುಷಿ ತಂದಿದೆ, ಈ ಪಿಚ್‍ನಲ್ಲಿ ಐಪಿಎಲ್‍ನಲ್ಲಿ ಆಡಿದ ಉತ್ತಮ ಪ್ರದರ್ಶನ ನೀಡಿದ್ದು , ಇಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನವನ್ನು ತೋರುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತೇನೆ ಎಂದು ಯುವ ಬೌಲರ್ ಅಕ್ಸರ್‍ಪಟೇಲ್ ಹೇಳಿದ್ದಾರೆ.

ಭಾರತಕ್ಕೆ ಲಕ್ಕಿ ಪಿಚ್:

ರಾಜ್‍ಕೋಟ್ ಪಿಚ್‍ನಲ್ಲಿ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ ಆಡಿದಾಗ ಮಹೇಂದ್ರಸಿಂಗ್ ಧೋನಿ ಪಡೆ ಅಸೀಸ್ ನೀಡಿದ 202 ರನ್‍ಗಳ ಬೆನ್ನಟ್ಟಿ ಜಯಿಸಿತ್ತು. ಈಗ ಪಿಚ್‍ನಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲೂ ಟೀಂ ಇಂಡಿಯಾವೇ ಗೆಲ್ಲುವ ಮೆಚ್ಚಿನ ತಂಡವಾಗಿ ಬಿಂಬಿಸಿಕೊಂಡಿದೆ.

ದಾಖಲೆ ನಿರ್ಮಿಸಲು ಕೊಹ್ಲಿ , ಯಜುವೇಂದ್ರ ಕಾತರ:

ಏಕದಿನ ಸರಣಿಯಲ್ಲಿ ರಿಕ್ಕಿಪಾಂಟಿಂಗ್‍ರ ಶತಕದ ದಾಖಲೆಯನ್ನು ಮುರಿದಿದ್ದ ವಿರಾಟ್ ಇಂದು 12 ರನ್‍ಗಳನ್ನು ಗಳಿಸಿದರೆ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್‍ರ 1889 ರನ್‍ಗಳ ದಾಖಲೆಯನ್ನು ಅಳಿಸಿ ಟ್ವೆಂಟಿ-20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 2 ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್‍ನ ಬ್ರಾಡಂ ಮೆಕುಲಂ 2140 ರನ್‍ಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾದ ಯುವ ಬೌಲರ್ ಆಗಿರುವ ಯಜುವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರೆ, ಈ ವರ್ಷ ಟ್ವೆಂಟಿ-20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಯೂ ಬಿಂಬಿಸಿಕೊಳ್ಳಲಿದ್ದಾರೆ.

Facebook Comments

Sri Raghav

Admin