ಟ್ವೆಂಟಿ-20 ಸರಣಿ ಸಮಬಲಕ್ಕೆ ಧೋನಿ ಬಳಗ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

india
ಫ್ಲೋರಿಡಾ ಆ.28- ಅಮೆರಿಕದಲ್ಲಿ ನಡೆದ ಮೊದಲ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ 1 ರನ್‌ನಿಂದ ಸೋಲು ಕಂಡಿರುವ ಭಾರತ ತಂಡದ ಆಟಗಾರರು ಇಂದಿನ ಪಂದ್ಯವನ್ನು ಹೇಗಾದರೂ ಗೆದ್ದು ಸರಣಿ ಸಮಬಲ ಸಾಸಲು ಹರಸಾಹಸ ಪಡುತ್ತಿದ್ದಾರೆ.  ನಿನ್ನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೈ ಚೆಲ್ಲಿದ್ದ ಧೋನಿ ನಂತರ ಪಂದ್ಯದ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ 2 ರನ್‌ಗಳಿಸಲು ವಿಫಲವಾಗಿ 1 ರನ್‌ನಿಂದ ಸೋಲು ಕಂಡಿರುವ ಭಾರತದ ಆಟಗಾರರು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ರೋಹಿತ್- ರಾಹುಲ್ ಇನ್ನಿಂಗ್ಸ್ ಆರಂಭ:
ಮೊದಲ ಟ್ವೆಂಟಿ-20ಯಲ್ಲಿ ಭಾರತ ತಂಡದ ಪರ ಆರಂಭಿಕರಾಗಿ ಕ್ರೀಸ್‌ಗಿಳಿಸಿದ್ದ ಅಜೆಂಕ್ಯಾ ರಹಾನೆಯವರು ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿ ದ್ದರಿಂದ ಇಂದಿನ ಪಂದ್ಯದಲ್ಲಿ ರೋಹಿತ್‌ಶರ್ಮಾ ಹಾಗೂ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಕಟ್ಟುವ ಲಕ್ಷಣಗಳಿವೆ.
ಮಿಂಚುವರೇ ವಿರಾಟ್ ಕೊಹ್ಲಿ:
ಅಮೆರಿಕಾದಲ್ಲಿರುವ ಕ್ರಿಕೆಟ್ ಪ್ರೇಮಿಗಳಿಗೆ ಹಾಟ್‌ಫೇವರಿಟ್ ಎನಿಸಿಕೊಂಡಿರುವ ಉಪನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ (16ರನ್) ರನ್ ಗಳಿಸಲು ಮಾತ್ರ ಶಕ್ತರಾಗಿದ್ದು , ಇಂದಿನ ಪಂದ್ಯದಲ್ಲಿ ಬೃಹತ್ ಇನ್ನಿಂಗ್ಸ್ ಕಟ್ಟುವತ್ತ ದೃಷ್ಟಿ ನೆಟ್ಟಿದ್ದಾರೆ.
ತಲೆನೋವಾಗಿರುವ
ಬೌಲರ‍್ಸ್‌ಗಳು:
ಪಂದ್ಯದ ಆರಂಭದಲ್ಲಿ ವಿಂಡೀಸ್‌ನ ಆಟಗಾರರನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಭಾರತದ ಬೌಲರ್‌ಗಳು ಕೂಡ ಇಂದಿನ ಪಂದ್ಯದಲ್ಲಿ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳ ಬೃಹತ್ ರನ್‌ದಾಹಕ್ಕೆ ಕಡಿವಾಣ ಹಾಕುವತ್ತ ಕೂಡ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಟ್ವೆಂಟಿ-20 ಚುಟುಕು ವಿಶ್ವಕಪ್‌ನನ್ನು ಕೈಚೆಲ್ಲಿದಂತೆ ಧೋನಿ ಹುಡುಗರು ಅಮೆರಿಕದಲ್ಲಿ ನಡೆಯು ತ್ತಿರುವ ಟ್ವೆಂಟಿ- 20 ಸರಣಿಯಲ್ಲೂ ನಿರಾಶೆ ಅನುಭವಿಸಬೇಕಾಗುತ್ತದೆ.

► Follow us on –  Facebook / Twitter  / Google+

 

Facebook Comments

Sri Raghav

Admin