ಡಬ್ಲ್ಯುಟಿಎ ಸೆಮಿಫೈನಲ್ಸ್ ನಲ್ಲಿ ಸಾನಿಯಾ ಮಿರ್ಜಾ ಜೋಡಿಗೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

Sania-Mirza

ಸಿಂಗಪುರ್, ಅ. 30- ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಟೆನ್ನಿಸ್‍ನ ಸರಣಿಯ ಸೆಮಿಫೈನಲ್‍ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ಜೊತೆಗಾತಿ ಮಾರ್ಟಿನಾ ಹೆಂಗೀಸ್ ಜೋಡಿಯು ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದೆ. ಸೆಮಿಫೈನಲ್‍ನಲ್ಲಿ ರಷ್ಯಾದ ಎಕ್ಟಾರಿನಾ ಮಾಕಾರೋವಾ ಹಾಗೂ ಎಲಿನಾ ವಿಸ್‍ನೈನಾ ವಿರುದ್ಧ ಉತ್ತಮ ಹೋರಾಟ ನೀಡಿ ಮೊದಲ ಸೆಟ್‍ನಲ್ಲಿ 6-3 ರಿಂದ ಗೆಲುವು ಸಾಧಿಸಿದರೂ ಕೂಡ ಮುಂದಿನ ಎರಡು ಸುತ್ತುಗಳಲ್ಲಿ 2-6, 6-10 ಸೆಟ್‍ಗಳಿಂದ ಸಾನಿಯಾ ಹಾಗೂ ಮಾರ್ಟಿನಾ ಸೋಲು ಕಂಡರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಿಪಬ್ಲಿಕ್ ದೇಶದ ಲುಸಿಯಾ ಹಾಗೂ ಬಿಥಾನಾಯ್ ಜೋಡಿಯುವ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕಾರ್ಲೊಲಿನೆ ಗ್ರಾಸಿಯಾ ಹಾಗೂ ಕ್ರಿಸ್ಟಿನಾ ಮಾಲ್ಡೆನೊವಿಕ್‍ರನ್ನು 6-3, 7-5ರಿಂದ ಸೋಲಿಸುವ ಮೂಲಕ ಫೈನಲ್‍ಗೇರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin