ಡಾಕ್ಟರೇಟ್ ಗೌರವ ಪಡೆದ ಸಿನಿಮಾ ನಿರ್ಮಾಪಕ

ಈ ಸುದ್ದಿಯನ್ನು ಶೇರ್ ಮಾಡಿ

4

ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಸಿನಿಮಾಗಳನ್ನು, ಕಲಾತ್ಮಕ ಸಿನಿಮಾಗಳನ್ನು ನೀಡಿರುವ ಆಡಿಟರ್ ಶ್ರೀನಿವಾಸ್ ಹಿರಿಯ ನಟ ದಿ.ದೀರೇಂದ್ರ ಗೋಪಾಲ್ ಅವರ ಅಳಿಯ ಕೂಡಾ ಹೌದು. ಇವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಧರ್ಮಪತ್ನಿ `ರಮಾಬಾಯಿ’ರವರ ಜೀವನ ಚರಿತ್ರೆಯ ಚಿತ್ರವನ್ನು ನಿರ್ಮಿಸಿ ಸದಭಿರುಚಿಯ ನಿರ್ಮಾಪಕ ಎಂದು ಕೂಡ ಗುರುತಿಸಿಕೊಂಡವರು. ವರ್ಷಕ್ಕೆ ಒಂದಾದರೂ ಉತ್ತಮ ಚಿತ್ರಗಳನ್ನು ನೀಡುವ ಹಂಬಲವನ್ನು ಹೊಂದಿರುವ ಆಡಿಟರ್ ಶ್ರೀನಿವಾಸ್ ಅವರು ಬಹಳ ಸರಳ ಸ್ವಭಾವದ ವ್ಯಕ್ತಿ. ಚಿತ್ರರಂಗದ ಅನೇಕ ಗೆಳೆಯರಿಗೆ ಬಹಳ ಹತ್ತಿರವಾದಂತಹವರು.

ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ನಿರ್ಮಾಣ ಸಂಸ್ಥೆಗಳ ಲೆಕ್ಕಪತ್ರ ವ್ಯವಹಾರಗಳನ್ನು ನೋಡಿಕೊಳ್ಳುವ ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ದೊರಕಿದೆ. ಇಂಡಿಯನ್ ವಿರ್ಚ್ಯುಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್‍ನಿಂದ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್ ಗೌರವ ಲಭಿಸಿದೆ. ಆಡಿಟರ್ ಶ್ರೀನಿವಾಸ್ ಎಂದೇ ಹೆಸರಾಗಿರುವವರು ಸಿನಿಮಾ ನಿರ್ಮಾಪಕರಾಗಿ ಹೆಸರು ಮಾಡಿರುವ ಶ್ರೀನಿವಾಸ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin