ಡಾಬಾ ಮೇಲೆ ಅಬಕಾರಿ ಪೊಲೀಸರ ದಾಳಿ : 8 ಲಕ್ಷ ಮೌಲ್ಯದ ಮದ್ಯ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Daba--01
ವಿಜಯಪುರ ,ಮಾ.20-ಡಾಬಾವೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು ಎಂಟು ಲಕ್ಷ ಮೌಲ್ಯದ ಅಕ್ರಮ ಮದ್ಯ  ಜಪ್ತಿ ಮಾಡಿದ್ದಾರೆ. ಅಬಕಾರಿ ಪೊಲೀಸ್ ಮುಜಾವರ ನೇತೃತ್ವದಲ್ಲಿ ಇಂದು ಬೆಳಗ್ಗೆ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ತಂಗಡಗಿ ರಸ್ತೆಯಲ್ಲಿರುವ ಎಂ.ಎಸ್.ಸಾವಜಿ ಡಾಬಾ ಮೇಲೆ ದಾಳಿ ನಡೆಸಲಾಯಿತು.

Daba--06

ದಾಳಿ ವೇಳೆ ಯಾದಗಿರಿ ಜಿಲ್ಲೆಯ ತಳ್ಳಹಳ್ಳಿ ಗ್ರಾಮದ ಮಡಿವಾಳಪ್ಪ ಕೊಡಗಾನೂರ ಎಂಬಾತನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಲಕ್ಷ್ಮಣ ಜಾಲಾಪೂರ ಪರಾರಿಯಾಗಿದ್ದಾನೆ. ಈ ಡಾಬಾದಲ್ಲಿ ಅಕ್ರಮವಾಗಿ ಸಾರಾಯಿಯನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ಮುಜಾವರ ಅವರು ಎಂಟು ಲಕ್ಷ ಮೌಲ್ಯದ ಸಾರಾಯಿ, ಒಂದು ಬೈಕ್ ಹಾಗೂ ಕ್ರೂಸರ್ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Daba--05

Daba--04

Daba--03

Facebook Comments

Sri Raghav

Admin