ಡಾರ್ಜಿಲಿಂಗ್ನಲ್ಲಿ ಹಿಂಸಾಚಾರ, ಹಲವರಿಗೆ ಗಾಯ, 10,000 ಪ್ರವಾಸಿಗರು ಆತಂತ್ರ
ಈ ಸುದ್ದಿಯನ್ನು ಶೇರ್ ಮಾಡಿ
ಕೊಲ್ಕತ, ಜೂ.9-ಪಶ್ಚಿಮ ಬಂಗಾಳದ ನಯನ ಮನೋಹರ ಗಿರಿಧಾಮ ಡಾರ್ಜಿಲಿಂಗ್ ಪ್ರತ್ಯೇಕತೆ ಕೂಗಿನ ಪ್ರತಿಭಟನೆಯಿಂದ ಅಕ್ಷರಶಃ ಹೊತ್ತಿ ಉರಿಯುತ್ತಿದ್ದು, 50ಕ್ಕೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಸುಮಾರು 10,000 ಪ್ರವಾಸಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಈ ಗಲಭೆಯಲ್ಲಿ ಕೆಲ ಪೊಲೀಸರೂ ಗಾಯಗೊಂಡಿದ್ದಾರೆ.
ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯ ಸ್ಥಾಪನೆಗೆ ಆಗ್ರಹಿಸಿ ಸ್ಥಳೀಯರು ಬೀದಿಗಿಳಿದು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆಯಿತು. ದೊಂಬಿ, ಗಲಭೆ, ವಾಹನಗಳಿಗೆ ಅಗ್ನಿಸ್ಪರ್ಶದಲ್ಲಿ ತೊಡಗಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬಲಪ್ರಯೋಗ ಮಾಡಿದಾಗ ಘರ್ಷಣೆ ಭುಗಿಲೆದ್ದಿತು. ಈ ಘಟನೆಗಳಲ್ಲಿ ಅನೇಕರು ಗಾಯಗೊಂಡರು. ಪರಿಸ್ಥಿತಿಯನ್ನು ನಿಭಾಯಿಸಲು ಡಾರ್ಜಿಲಿಂಗ್ನಲ್ಲಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments