ಡಾರ್ಜಿಲಿಂಗ್ ಮೂಲದ ಮಹಿಳೆಯ ಕೆನ್ನೆ ಕಚ್ಚಿದ್ದ ಶಿರಸಿಯ ರಸಿಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sirsi

ಶಿರಸಿ ಆ. 30 : ಆ. 25ರಂದು ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿಯಲ್ಲಿ ನೆರೆಮನೆಗೆ ನುಗ್ಗಿ ಮಲಗಿದ್ದ ಡಾರ್ಜಿಲಿಂಗ್ ಮೂಲದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿ, ಪ್ರತಿರೋಧ ತೋರಿಸಿದಾಗ ಆಕೆಯ ಕೆನ್ನೆಕಚ್ಚಿ ಪರಾರಿಯಾಗಿದ್ದ ಆರೋಪಿ ಪುನೀತ್ (24)ನನ್ನು ಮಂಗಳವಾರ ಆತನ ಹುಟ್ಟೂರಿನಲ್ಲಿ ಬಂಧಿಸಲಾಗಿದೆ.  ಘಟನೆ ಬಳಿಕ ಪರಾರಿಯಾಗಿರುವ ಆತನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದ ಎಚ್‌ಎಎಲ್ ಪೊಲೀಸರು ಶಿರಸಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಬೋರಲಿಂಗಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಡಾರ್ಜಿಲಿಂಗ್ ಮೂಲದ 34 ವರ್ಷದ ಮಹಿಳೆ ತನ್ನ ತಂಗಿಯ ಜತೆಗೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಆಕೆ ರೆಸ್ಟೋರೆಂಟ್ ಒಂದರಲ್ಲಿ ಪರಿಚಾರಕಿಯಾಗಿದ್ದರು.

ಆ. 25ರಂದು ಮಹಿಳೆಯ ಸಹೋದರಿ ಕೆಲಸಕ್ಕೆ ಹೋಗಿದ್ದು, ಏಕಾಂಗಿಯಾಗಿದ್ದ ಆಕೆ ಮಧ್ಯಾಹ್ನ ಊಟದ ನಂತರ ನಿದ್ರಿಸುತ್ತಿದ್ದರು. ಆದರೆ, ಮಲಗುವ ಮುನ್ನ ಮನೆಯ ಬಾಗಿಲು ಹಾಕುವುದನ್ನು ಮರೆತಿದ್ದರು.  ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿ ಪುನೀತ್, ಮಹಿಳೆ ಮಲಗಿದ್ದ ಕೊಠಡಿಗೆ ಬಂದು ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಎಚ್ಚರಗೊಂಡ ಆಕೆ ಪುನೀತ್ನನ್ನು ತಳ್ಳಿದರಾದರೂ ಬಿಡದ ಆತ ಮಹಿಳೆಯನ್ನು ಹಿಡಿದುಕೊಂಡು ಕೆನ್ನೆಗೆ ಕಚ್ಚಿದ್ದಾನೆ. ಆಕೆ ಕಿರುಚಿಕೊಂಡರೂ ಬಿಡದ ಆತ ಜೋರಾಗಿ ನಾಲ್ಕೈದು ಬಾರಿ ಕಚ್ಚಿ ಗಾಯಗೊಳಿಸಿದ್ದಾನೆ. ತೀವ್ರ ಪ್ರತಿರೋಧ ತೋರಿದ ಮಹಿಳೆ ಆತನ ಕೈಕಚ್ಚಿ ಬಿಡಿಸಿಕೊಂಡು ಹೊರಗೆ ಓಡಿಬಂದು ರಕ್ಷಣೆಗಾಗಿ ಕಿರುಚಿಕೊಂಡಿದ್ದಾರೆ. ಆಗ ಬೆದರಿದ ಪುನೀತ್ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾಗುವಾಗ ಗಾಬರಿಯಾಗಿ ಪುನೀತ್ ತನ್ನ ಮೊಬೈಲ್ ಬೀಳಿಸಿಕೊಂಡಿದ್ದ, ಅದು ಪೊಲೀಸರಿಗೆ ಸಿಕ್ಕಿದೆ. ಅದರ ಅಧಾರದ ಮೇಲೆ ಆತ ಉತ್ತರ ಕನ್ನಡ ಮೂಲದವನು ಎಂದು ತಿಳಿದುಬಂದಿತ್ತು. ಅಲ್ಲದೆ, ಆತ ಕೆಲಸ ಮಾಡುತ್ತಿದ್ದ ಹೋಟೆಲ್ ಕುರಿತೂ ಮಾಹಿತಿ ಲಭ್ಯವಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin