ಡಾ.ಪರಮಶಿವಯ್ಯ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

chintamani

ಚಿಂತಾಮಣಿ, ಏ.24- ಡಾ.ಪರಮಶಿವಯ್ಯ ವರದಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಕರ್ನಾ ಟಕ ರೈತ ಸಂಘದ ಆಶ್ರಯದಲ್ಲಿ ನೂರಾರು ರೈತರು ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸಿದರುನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಾಲೂಕು ಕಛೇರಿಯ ಆವರಣ ದಲ್ಲಿ ಪ್ರತಿಭಟನಾ ಧರಣಿ ನಡೆಸಿದ ರೈತರು ಗ್ರಾಮೀಣ ಭಾಗದಲ್ಲಿ ಜನತೆ ಕುಡಿಯುವ ನೀರಿಗೆ, ರೈತರು ಕೃಷಿ ಕ್ಷೇತ್ರದಲ್ಲಿ ನೀರಿಲ್ಲದೆ ಒದ್ದಾಡುತ್ತಿದ್ದರೂ ರಾಜ್ಯ ಸರಕಾರಕ್ಕೆ ಕಿವಿ ಕೇಳಿಸದಂತೆ ಕಿವುಡುರಾಗಿ ಕಣ್ಣಿಗೆ ಕಾಣದಂತೆ ಕಣ್ಣು ಕಳೆದುಕೊಂಡವರ ಸ್ಥಿತಿಯಲ್ಲಿದೆಯೆಂದು ದೂರಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಜೆ.ವಿ.ರಘುನಾಥರೆಡ್ಡಿ ಮೇವಿನ ಕೊರತೆ ಯನ್ನು ನೀಗಿಸಲು ತೆರೆದಿರುವ ಗೋಶಾಲೆಗಳು ಕಾಟಾಚಾರದಂತಿದ್ದು ಇದರಿಂದ ರೈತರ ಬವಣೆ ನೀಗಲು ಸಾಧ್ಯವಿಲ್ಲವೆಂದು ಕಿಡಿಕಾರಿದರು.

ರೈತರ ಸಾಲ ಮನ್ನಾ ಮಾಡದೆ ಹುಸಿ ಬಜೆಟ್ ನೀಡಿದ ಸರಕಾರ ರೈತರ ಪರ ನಿಲ್ಲಲಿಲ್ಲವೆಂದು ದೂರಿದರು. ಕೃಷಿ ಇಲಾಖೆಯಿಂದ ರೈತರಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ, ಕೊಳವೆ ಬಾವಿ ಗಳಿಗೆ ನಿರಂತರ ತ್ರಿಪೇಸ್ ವಿದ್ಯುತ್‍ನ್ನು ಒದಗಿಸುವುದು, ಕಂದಾಯ ಅಧಿಕಾರಿಗಳು ಕೇಂದ್ರ ವ್ಯಾಪ್ತಿಯಲ್ಲಿದ್ದು,ಕೂಡಲೇ ಈಡೇರಿಸುವಂತೆ ತಹಶೀಲ್ಧಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಾಮಯ್ಯ, ರಾಜ್ಯ ಕಾರ್ಯದರ್ಶಿ ಬಿ.ವಿ.ಶ್ರೀರಾಮರೆಡ್ಡಿ, ಯುವ ಘಟಕದ ಮಣಿ, ವಕೀಲೆ ರಚನಾಗೌಡ, ಮುಖಂಡ ರಾದ ತಿಮ್ಮರಾಯಪ್ಪ, ಶ್ರೀನಿವಾಸ್‍ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin