ಡಿಎಂಕೆ ಶಾಸಕರಿಂದ ಅಣುಕು ವಿಧಾಸಭೆ ಕಲಾಪ

ಈ ಸುದ್ದಿಯನ್ನು ಶೇರ್ ಮಾಡಿ

DMK-Memb

ಚೆನ್ನೈ,ಆ.19-ತಮಿಳುನಾಡು ವಿಧಾನಸಭೆಯಲ್ಲಿ ಸದನ ಹಕ್ಕುಚ್ಯುತಿ ಆರೋಪದ ಮೇಲೆ ಡಿಎಂಕೆ ಶಾಸಕರನ್ನು ಅಮಾನತುಪಡಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಡಿಎಂಕೆಯ 89 ಶಾಸಕರು ಇಂದು ಅಣುಕು ವಿಧಾಸಭೆ ಕಲಾಪ ನಡೆಸುವ ಮೂಲಕ ಆಡಳಿತಾರೂಢ ಎಐಡಿಎಂಕೆ ಹಾಗೂ ಸಭಾಧ್ಯಕ್ಷ ಧನಪಾಲ್ ವಿರುದ್ಧ ಪ್ರತಿಭಟನೆ ನಡೆಸಿದರು.   ನಗರದ ಸೆಂಟ್ಜಾರ್ಜ್ ಪೋರ್ಟ್ನಲ್ಲಿ ಅಣುಕು ಪ್ರದರ್ಶನ ನಡೆಸಿದ ವಿಪಕ್ಷ ನಾಯಕರು ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಮತ್ತು ಸ್ಪೀಕರ್ ಆಗಿ ದೊರೈ ಮುರುಗನ್ ಅವರನ್ನು ಪ್ರತಿಬಿಂಬಿಸಿ ಅಣುಕು ಕಲಾಪ ನಡೆಸಿದರು.
ಈ ಅಣುಕು ವಿಧಾನಸಭೆ ಕಲಾಪ ಪ್ರದರ್ಶನವು ಸಾರ್ವಜನಿಕ ಹಾಗೂ ಮಾಧ್ಯಮದವರ ಗಮನ ಸೆಳೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.