ಡಿಕೆಶಿ ಮೇಲೆ ಐಟಿ ಅಟ್ಯಾಕ್ , ಮೈಸೂರಿನ ಮಾವನ ಮನೆಯಲ್ಲಿ ನೀರವ ಮೌನ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar-Mava

ಮೈಸೂರು, ಆ.4- ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಇತ್ತ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಅವರ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ತಿಮ್ಮಯ್ಯ ಅವರ ಮನೆಯಲ್ಲಿ ಇಂದೂ ಕೂಡ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಿವಕುಮಾರ್ ಅವರ ಮೇಲಿನ ದಾಳಿಯ ಪ್ರಭಾವ ಅವರ ಮಾವನ ಮೇಲೂ ಬೀರಿದ್ದು, ಮನೆಯವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ನಗರದ ಇಟ್ಟಿಗೆ ಗೂಡಿನಲ್ಲಿರುವ ತಿಮ್ಮಯ್ಯ ಅವರ ಮನೆಯಲ್ಲಿ ಮೂರು ದಿನಗಳಿಂದ ಸತತ ಪರಿಶೀಲನೆ ನಡೆದಿದೆ. ಇಂದು ಬೆಳಗ್ಗೆಯಿಂದಲೇ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ನಿನ್ನೆ ಡಿ.ಕೆ.ಶಿವಕುಮಾರ್ ಅವರ ಭಾವಮೈದುನ ಹಾಗೂ ಅವರ ಪತ್ನಿಯನ್ನು ಐಟಿ ಅಧಿಕಾರಿಗಳು ಬ್ಯಾಂಕ್‍ವೊಂದಕ್ಕೆ ಕರೆದೊಯ್ದು ಲಾಕರ್‍ನಲ್ಲಿದ್ದ ದಾಖಲೆಗಳು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇಂದು ಅವರಿಬ್ಬರಿಂದ ದಾಖಲೆಗಳ ಮೂಲಗಳ ಬಗ್ಗೆ ಹಾಗೂ ಇವು ಎಲ್ಲಿಂದ ಬಂದವು, ಯಾರು ಕೊಟ್ಟದ್ದು ಅಥವಾ ನಿಮ್ಮದೆಯೇ ಎಂಬುದನ್ನೆಲ್ಲ ವಿಚಾರಿಸುತ್ತಿದ್ದಾರೆ. ತಿಮ್ಮಯ್ಯ ಹಾಗೂ ಕುಟುಂಬದವರಿಂದ ಮಾಹಿತಿ ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.  ನಜರ್‍ಬಾದ್ ಠಾಣೆ ಪೊಲೀಸರು ಮನೆಯ ಮುಂದೆ ಕಾವಲಿದ್ದಾರೆ. ಒಳಗೆ ಹೋಗಿ ಬರಲು ಯಾರಿಗೂ ಅನುಮತಿ ನೀಡಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin