ಡಿಕೆ ಬ್ರದರ್ಸ್’ಗೆ ಮತ್ತೊಮ್ಮೆ ಸೆಡ್ಡುಹೊಡೆದ ಯೋಗೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Yogishwar--002

ಚನ್ನಪಟ್ಟಣ,ಅ.23- ತಾಲೂಕಿನ ಜನತೆ ಸ್ವಾಭಿಮಾನಿಗಳು, ಡಿಕೆಶಿ ಸಹೋದರರ ದಬ್ಬಾಳಿಕೆಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಗುಡುಗಿದ್ದಾರೆ.  ತಾಲೂಕಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಸ್ವಾಭಿಮಾನಿ, ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಸ್ವಾಭಿಮಾನಿ ಮತದಾರರು ನನ್ನ 20 ವರ್ಷದ ರಾಜಕಾರಣದಲ್ಲಿನ ಪಯಣಕ್ಕೆ ನನ್ನ ಹೆಗಲಿಗೆ ಹೆಗಲು ಕೊಟ್ಟಿದ್ದೀರಿ, ಅದಕ್ಕೆ ಪ್ರತಿಯಾಗಿ ನಾನು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದೇನೆ. ನನಗೆ ಅಧಿಕಾರದ ಕುರ್ಚಿ ನೀಡುವುದು ಯಾವುದೋ ಸರ್ಕಾರವಲ್ಲ. ತಾಲೂಕಿನ ಸ್ವಾಭಿಮಾನಿ ಮತದಾರರಾದ ನೀವು. ನಿಮ್ಮ ಸ್ವಾಭಿಮಾನ ಕೆಣಕಿದವರಿಗೆ ತಕ್ಕ ಉತ್ತರ ನೀಡಿ ಎಂದರು.

ನನಗೆ ಡಿಕೆಶಿ ಸಹೋದರರ ಮೇಲೆ ಯಾವ ಹಗೆತನವೂ ಇಲ್ಲ. ಆದರೂ ಅವರು ನನ್ನನ್ನು ರಾಜಕೀಯವಾಗಿ ಪ್ರತಿ ಹಂತದಲ್ಲೂ ತುಳಿಯುತ್ತಾ ಬಂದಿದ್ದಾರೆ. ನನ್ನ ಸಂಯಮವನ್ನು ಪರೀಕ್ಷೆ ಮಾಡುತ್ತಲೇ ಬಂದಿದ್ದಾರೆ. ಆದರೂ ನನಗೆ ನನ್ನ ತಾಲೂಕಿನ ಅಭಿವೃದ್ಧಿಯೇ ಮುಖ್ಯವಾಗಿದೆ ನನ್ನ ನಿರ್ಧಾರಕ್ಕೆ ನಿಮ್ಮ ಬೆಂಬಲ, ಸಹಕಾರ ನೀಡಿ ಎಂದು ಮನವಿ ಮಾಡಿದರು. ನಿಮ್ಮ ಸಹಕಾರ ಇರುವವರೆಗೆ ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ನೀವೇ ಸಾಭೀತು ಮಾಡಿದ್ದೀರಿ. ಈಗಲೂ ನಿಮ್ಮ ಬೆಂಬಲ ನೀಡಿ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಿ ಎಂದು ಯೋಗೇಶ್ವರ್ ಹೇಳಿದರು.

ಎ.ಸಿ.ವೀರೇಗೌಡ ಮೀರ್‍ಸಾದಕ್: ಸಚಿವ ಡಿ.ಕೆ.ಶಿವಕುಮಾರ್‍ಗೆ ನಮ್ಮ ಪಟ್ಟಣದ ಕಸ ಸಂಸ್ಕರಣೆ ಮಾಡಲು ಒಂದು ಸೂಕ್ತ ಜಾಗ ಗುರ್ತಿಸಿಕೊಡಲು ಆಗಲಿಲ್ಲ. ಅಂಥವರು ಮೊನ್ನೆಯ ಸಭೆಯಲ್ಲಿ ನಾನು ಕಾಂಗ್ರೆಸ್ ಭವನಕ್ಕೆ ಅಡ್ಡಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಆದರೆ ಅವರು ಕಾಂಗ್ರೆಸ್ ಭವನವನ್ನು ನಿರ್ಮಾಣ ಮಾಡಲು ಹೊರಟಿದ್ದು, ದೇವಸ್ಥಾನದ ಜಾಗದಲ್ಲಿ. ನಮ್ಮಲ್ಲೇ ಇದ್ದ ಮೀರ್‍ಸಾದಕ್ ಎ.ಸಿ.ವೀರೇಗೌಡ ನನ್ನ ಗಮನಕ್ಕೆ ಬಾರದಂತೆ ಭವನಕ್ಕೆ ಜಾಗ ಪಡೆದುಕೊಂಡಿದ್ದ. ಇದಕ್ಕೆ ತಾಲೂಕಿನ ಜನತೆಯ ವಿರೋಧವಾದ ಹಿನ್ನಲೆ ನಾನು ಮಧ್ಯಪ್ರವೇಶ ಮಾಡಿದೆ ಎಂದು ಟಾಂಗ್ ನೀಡಿದರು.

ತಾಲೂಕಿನಲ್ಲೇ ಸ್ಪರ್ಧೆ:

ನನಗೆ ಕಳೆದ 20 ವರ್ಷದಿಂದ ರಾಜಕೀಯವಾಗಿ ಶಕ್ತಿ ನೀಡಿರುವ ತಾಲೂಕಿನಲ್ಲಿ ಇನ್ನು ಆಗಬೇಕಿರುವ ಅಭಿವೃದ್ಧಿ ಕೆಲಸಗಳು ಇವೆ. ನಾನು ತಾಲೂಕಿನ ಜನತೆಯ ಋಣ ತೀರಿಸುವವರೆಗೆ ತಾಲೂಕಿನಲ್ಲೇ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಯೋಗೇಶ್ವರ್ ಕಾರ್ಯಕರ್ತರಲ್ಲಿನ ಗೊಂದಲಿಕ್ಕೆ ಸ್ಪಷ್ಟನೆ ನೀಡಿದರು. ತಾಪಂ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಎಂ.ಎನ್ ಸುರೇಶ್, ಪ್ರಭು, ಲಕ್ಷ್ಮಿ,ಮೀರಾ, ಆಶಾರಾಣಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ,ರಾಮು, ಮುಖಂಡರಾದ ಮಲವೇಗೌಡ, ಕುಳ್ಳಪ್ಪ, ದಿನೇಶ್, ಪದ್ಮಕೃಷ್ಣಯ್ಯ, ಬಿಟಿ ಜಯಮುದ್ದಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು

Facebook Comments

Sri Raghav

Admin