ಡಿಜಿಟಲೀಕೃತ ಮಾರುಕಟ್ಟೆಗೆ ಹೊಂದಿಕೊಳ್ಳಲು ಸಜ್ಜಾಗಿ

ಈ ಸುದ್ದಿಯನ್ನು ಶೇರ್ ಮಾಡಿ

99
ಬೆಳಗಾವಿ,ಏ.9- ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅವ್ಯಾಹತ ಆವಿಷ್ಕಾರಗಳ ಬೆನ್ನಲ್ಲೇ ಇಂದಿನ ಮಾರುಕಟ್ಟೆ ಕೂಡ ಡಿಜಿಟಲೀಕರಣ ಗೊಳ್ಳುತ್ತಿದ್ದು ಅದಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಉನ್ನತೀಕರಿಸಿ ಕೊಳ್ಳುವುದು ಅಗತ್ಯ ಎಂದು ಡಾ. ಎ.ಬಿ. ಪವಾರ ಹೇಳಿದರು. ಖಾನಾಪುರ ಪಟ್ಟಣದ ಮರಾಠಾ ಮಂಡಳಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಿಜಿಟಲ್ ಮಾರ್ಕೆಟಿಂಗ್ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಚಂದಗಡ ಕಾಲೇಜಿನ ಪ್ರಾಧ್ಯಾಪಕ ಡಾ. ಸೋನಪ್ಪಾ ಗೋರಲ ಮಾತನಾಡಿ, ಹಿಂದಿನ ಮತ್ತು ಇಂದಿನ ಮಾರುಕಟ್ಟೆಗಳ ವ್ಯವಸ್ಥೆಯ ವಿವಿಧ ಆಯಾಮಗಳನ್ನು ವಿಶ್ಲೇಷಿಸಿ ಡಿಜಿಟಲ್ ಮಾರುಕಟ್ಟೆಯಿಂದ ಆಗುವ ಅನುಕೂಲಗಳು ಮತ್ತು ಲಾಭಗಳ ಕುರಿತು ವಿವರಿಸಿದರು. ಮರಾಠಾ ಮಂಡಳ ಸಂಸ್ಥೆ ಸದಸ್ಯ ಶಿವಾಜಿರಾವ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಮಾರು 200ಜನ ವಿದ್ಯಾರ್ಥಿ ಮತ್ತು ಶಿಕ್ಷಕ ಪ್ರತಿನಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಮರಾಠಾ ಮಂಡಳದ ಸದಸ್ಯ ಪರಷುರಾಮ ಗುರವ ವೇದಿಕೆಯಲ್ಲಿದ್ದರು. ಬೆಳಗಾವಿ ಮರಾಠಾ ಮಂಡಳ ಕಾಲೇಜಿನ ಪ್ರೊ . ಜಿ.ವೈ. ಬೆನ್ನಾಳಕರ ಮತ್ತು ಪ್ರೊ . ಎಚ್.ಜಿ. ಮೊಳೆರಾಖಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin