ಡಿಜಿಧನ್ ಯೋಜನೆಗೆ 50ನೇ ದಿನ : 8 ಲಕ್ಷ ಮಂದಿಗೆ 133 ಕೋಟಿ ರೂ. ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

Digi-Dhan--041

ನವದೆಹಲಿ, ಫೆ.13– ಡಿಜಿಟಲ್ ಪಾವತಿ ಯೋಜನೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರದ ನೀತಿ ಆಯೋಗ ಅನುಷ್ಠಾನಗೊಳಿಸಿರುವ ಪುರಸ್ಕಾರ ಯೋಜನೆಯಡಿ ಕಳೆದ 50 ದಿನಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಮಂದಿಗೆ 133 ಕೋಟಿ ರೂ.ಗಳ ಬಹುಮಾನ ನೀಡಲಾಗಿದೆ.   ಡಿಜಿ ಧನ್ ವ್ಯಾಪಾರಿ ಯೋಜನೆ ಯಶಸ್ವಿ 50ನೇ ದಿನ ಪೂರೈಸಿದೆ. ಈ ಯೋಜನೆಯಡಿ ಈವರೆಗೆ 8 ಲಕ್ಷಕ್ಕೂ ಅಧಿಕ ಜನರಿಗೆ ನಗದು ರೂಪದಲ್ಲಿ 133 ಕೋಟಿ ರೂ. ಬಹುಮಾನ ನೀಡಲಾಗಿದೆ ಎಂದು ನೀತಿ ಅಯೋಗ ಟ್ವೀಟ್ ಮಾಡಿದೆ.   ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ಡಿ.25ರಂದು ಪ್ರಧಾನಿ ನರೇಂದ್ರ ಮೋದಿ ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿ-ಧನ್ ವ್ಯಾಪಾರಿ-ಎಂಬ ಎರಡು ಯೋಜನೆಗಳನ್ನು ಪ್ರಕಟಿಸಿದ್ದರು. ಏಪ್ರಿಲ್ 14ರವರೆಗೆ ಈ ಯೋಜನೆ ಜಾರಿಯಲ್ಲಿದ್ದು, ಇನ್ನೂ ಸಾವಿರಾರು ಮಂದಿ ಬಹುಮಾನದ ಪ್ರಯೋಜನ ಪಡೆಯಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin