ಡಿಜಿಪಿ ಓಂಪ್ರಕಾಶ್ ಪರ ಐಪಿಎಸ್ ಅಧಿಕಾರಿಗಳ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

afAFGDADAGಬೆಂಗಳೂರು, ಆ.4– ಡಿಜಿಪಿ ಓಂ ಪ್ರಕಾಶ್ ಅವರ ವರ್ಗಾವಣೆಗೆ ಚಿಂತನೆ ನಡೆಸುತ್ತಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಡಿಜಿಪಿ ಓಂ ಪ್ರಕಾಶ್ ಅವರನ್ನು ಬಲವಂತದಿಂದ ರಜೆಯ ಮೇಲೆ ತೆರಳುವಂತೆ ಸೂಚನೆ ನೀಡಿ. ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲು ರಾಜ್ಯ ಚಿಂತಿಸುತ್ತಿದೆ.
ಸರಕಾರದ ಈ ನಡೆಯನ್ನು ಐಪಿಎಸ್ ಅಧಿಕಾರಿಗಳ ಖಂಡಿಸಿದ್ದಾರೆ. ಮೊದಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯನವರನ್ನು ವಜಾಗೊಳಿಸಿ, ಆವಾಗ ಪೊಲೀಸ್ ಇಲಾಖೆ ತಂತಾನೆ ಸುಧಾರಣೆಯಾಗುತ್ತದೆ. ಒಂದು ವೇಳೆ, ಡಿಜಿಪಿ ಓಂ ಪ್ರಕಾಶ್ ಅವರನ್ನು ವರ್ಗಾವಣೆಗೊಳಿಸುವುದರಿಂದ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಐಪಿಎಸ್ ಅಧಿಕಾರಿಗಳು ಸರಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಡಿಜಿಪಿ ಓಂಪ್ರಕಾಶ್ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಐಪಿಎಸ್ ಮತ್ತು ಎಡಿಜಿಪಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಮಹದಾಯಿ ಹೋರಾಟದ ಸಂದರ್ಭದಲ್ಲಿ ಯಮನೂರು ಗ್ರಾಮದಲ್ಲಿ ಪೊಲೀಸರು ಎಸಗಿದ ದೌರ್ಜನ್ಯ ರಾಜ್ಯದ ಜನತೆಯಲ್ಲಿ ಆಕ್ರೋಶ ಮೂಡಿಸಿದ ಹಿನ್ನೆಲೆಯಲ್ಲಿ, ಡಿಜಿಪಿ ಓಂಪ್ರಕಾಶ್ ಬದಲಾವಣೆಗೆ ಸರಕಾರ ಮುಂದಾಗಿರಬಹುದು ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin