ಡಿಪ್ಲೋಮಾ ಮತ್ತು ಬಿಎಸ್ಸಿ ಆದವರಿಗೆ ಇಸ್ರೋದಲ್ಲಿವೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ISRO-1

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ಕಿರಿಯ ಸಂಶೋಧಕರ ಹುದ್ದೆಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 84

ಹುದ್ದೆಗಳ ವಿವರ :

1.ಕಿರಿಯ ಸಂಶೋಧಕರು (ಜೆ ಆರ್ ಎಫ್) : 58

2. ಸಂಶೋಧನಾ ಸಹಾಯಕರು (ಆರ್ ಎ) : 14

3.ತಾಂತ್ರಿಕ ಸಹಾಯಕರು : 4

4. ವೈಜ್ಞಾನಿಕ ಸಹಾಯಕರು : 5

5. ತಂತ್ರಜ್ಞರು : 3

ವಯೋಮಿತಿ : ಕ್ರಮ ಸಂಖ್ಯೆ 1ರ ಹುದ್ದೆಗೆ 28 ವರ್ಷದೊಳಗಿರಬೇಕು, ಉಳಿದ ಹುದ್ದೆಗಳಿಗೆ 18 ರಿಂದ 35 ವರ್ಷದೊಳಗಿರಬೇಕು. ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ವಿದ್ಯಾರ್ಹತೆ : ಕ್ರಮ ಸಂಖ್ಯೆ 3ರ ಹುದ್ದೆಗಳಿಗೆ ಪ್ರಥಮ ಶ್ರೇಣಿಯಲ್ಲಿ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. ಕ್ರಮ ಸಂಖ್ಯೆ 4ರ ಹುದ್ದೆಗಳಿಗೆ ಬಿಎಸ್ಸಿ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ ; ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 17-11-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  https://www.isro.gov.in  ಗೆ ಭೇಟಿ ನೀಡಿ

ಅಧಿಸೂಚನೆ

Notification-ISRO-JRF-RA-Other-Posts-001 Notification-ISRO-JRF-RA-Other-Posts-002 Notification-ISRO-JRF-RA-Other-Posts-003

Facebook Comments

Sri Raghav

Admin