ಡಿಪ್ಲೋಮ ವಿದ್ಯಾರ್ಥಿ ಕೊಲೆ ಮಾಡಿದ್ದ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Diploma-Crime-Murder

ಬೆಂಗಳೂರು, ಡಿ.22- ನಗರದ ಪಿಇಎಸ್ ಕಾಲೇಜಿನ ಡಿಪ್ಲೋಮೊ ವಿದ್ಯಾರ್ಥಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿರುವ ಹನುಮಂತನಗರ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.  ಶ್ರೀನಗರದ ಯಶವಂತ್(19), ಶ್ರೀನಿವಾಸ್(19), ಸುಮನ್(19)ಹಾಗೂ ಮೂವರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಶೇಖರ್ ಅಲಿಯಾಸ್ ಮೊಟ್ಟೆ ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗೆ ತನಿಖೆ ಮುಂದುವರೆದಿದೆ.

Murder-01

ಪಿಇಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಡಿಪ್ಲೋಮೊ ವ್ಯಾಸಂಗ ಮಾಡುತ್ತಿದ್ದ ಹರ್ಷ(20)ನ ಸ್ನೇಹಿತರೊಂದಿಗೆ ಆರೋಪಿ ಶೇಖರ್ ಡಿ.19ರಂದು ಸಂಜಯನಗರದ ಟಿಂಬರ್‍ಲೇಔಟ್‍ನಲ್ಲಿ ಮೊಬೈಲ್ ಪ್ಲೋನ್ ವಿಚಾರಕ್ಕೆ ಗಲಾಟೆಯಾಗಿದ್ದು, ಆ ಸಂದರ್ಭದಲ್ಲಿ ಹರ್ಷನ ಕಡೆಯವರು ಶೇಖರ್‍ಗೆ ಹೊಡೆದಿದ್ದರು ಎನ್ನಲಾಗಿದೆ.  ಇದೇ ವಿಚಾರವಾಗಿ ಶೇಖರ್ ಇವರ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಸಹಚರರನ್ನು ಒಟ್ಟುಗೂಡಿಸಿಕೊಂಡು ಡಿ.20ರಂದು ಮಧ್ಯಾಹ್ನ 2ಗಂಟೆಯಲ್ಲಿ ಪಿಇಎಸ್ ಕಾಲೇಜು ಬಳಿ ಇದ್ದ ಹರ್ಷನಿಗೆ ಬ್ಯಾಟ್‍ನಿಂದ ಹೊಡೆದು ಚಾಕುವಿನಿಂದ ಬೆನ್ನಿಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ವಿದ್ಯಾರ್ಥಿ ಹತ್ಯೆಯಾಗಿದ್ದ ಕಾರಣ ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಆರೋಪಿತರ ಪತ್ತೆಗಾಗಿ ಚಾಮರಾಜಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಆರ್.ಮಹಾಂತರೆಡ್ಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರೋಪಿಗಳ ಬಂಧನಕ್ಕೆ ಅವಿರತ ಪ್ರಯತ್ನ ನಡೆಸಿ ಸುಳಿವು ಪತ್ತೆಹಚ್ಚಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಹನುಮಂತನಗರ ಠಾಣೆ ಇನ್ಸ್‍ಪೆಕ್ಟರ್ ದಿಲೀಪ್‍ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕೃತ್ಯ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin