ಡಿಬಿಟಿಯಿಂದ 50,000 ಕೋಟಿ ರೂ. ಉಳಿತಾಯ : ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

DBT--01

ನವದೆಹಲಿ, ಮೇ 28-ಕಳೆದ ಮೂರು ವರ್ಷಗಳಲ್ಲಿ ನೇರ ಫಲಾನುಭವ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‍ಫರ್-ಡಿಬಿಟಿ) ವ್ಯವಸ್ಥೆಯಿಂದ ಸರ್ಕಾರಕ್ಕೆ 50,000 ಕೋಟಿ ರೂ. ಗಳ ಉಳಿತಾಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ವಿವರಿಸಿದರು.  ಸೋರಿಕೆಗಳನ್ನು ತಪ್ಪಿಸುವ ಮೂಲಕ ಡಿಬಿಟಿ (ನೇರ ಫಲಾನುಭವ ವರ್ಗಾವಣೆ) 49,560 ಕೋಟಿ ರೂ.ಗಳನ್ನು ಉಳಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಮೂಲಕ 32 ಕೋಟಿ ಫಲಾನುಭವಿಗಳ ಖಾತೆಗಳಿಗೆ 1.5 ಲಕ್ಷ ಕೋಟಿ ರೂ.ಗಳು ನೇರವಾಗಿ ತಲುಪಿವೆ ಎಂದು ಅವರು ಹೇಳಿದರು.ಮಧ್ಯವರ್ತಿಗಳ ಹಿಡಿತದಿಂದ ತಪ್ಪಿಸಲು ಹಾಗೂ ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು ಫಲಾನುಭವಿಗಳ ಖಾತೆಗೆ ಸಹಾಯಧನಗಳು ನೇರವಾಗಿ ತಲುಪುವಂತೆ ಮಾಡಲು ನೇರ ಫಲಾನುಭವ ವರ್ಗಾವಣೆಯನ್ನು ಖಾತರಿಗೊಳಿಸಲಾಗಿದೆ. ಈ ಹಿಂದೆ 100 ರೂಪಾಯಿಗಳಲ್ಲಿ 15 ರೂ.ಗಳು ಮಾತ್ರ ಫಲಾನುಭವಿಗಳಿಗೆ ತಲುಪುತ್ತಿತ್ತು. ಈಗ ಪೂರ್ಣ 100 ರೂ.ಗಳು ಬಡವರಿಗೆ ತಲುಪುತ್ತಿದೆ ಎಂದು ಅಮಿತ್ ವಿವರಿಸಿದರು.

ಕಲ್ಲಿದ್ದಲು ನಿಕ್ಷೇಪಗಳು ಮತ್ತು ಸ್ಪೆಕ್ಟ್ರಂ ಹರಾಜುಗಳನ್ನು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳಲಾಗಿದೆ. 82 ಕಲ್ಲಿದ್ದಲು ನಿಕ್ಷೇಪಗಳ ಹರಾಜಿನಿಂದ 3.94 ಲಕ್ಷ ಕೋಟಿ ರೂ.ಗಳು ಸರ್ಕಾರದ ಬೊಕ್ಕಸಕ್ಕೆ ಲಭಿಸಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin