ಡಿಯುಎಸ್‌ಯು ಚುನಾವಣೆ : ಎಬಿವಿಪಿಗೆ 3 ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

abvp

ನವದೆಹಲಿ,ಸೆ.10- ದೆಹಲಿ ಯೂನಿವರ್ಸಿಟಿ ಸ್ಟುಡೆಂಟ್ಸ್ ಯೂನಿಯನ್‌ನಲ್ಲಿ(ಡಿಯುಎಸ್‌ಯು) ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಅಧ್ಯಕ್ಷ ಹುದ್ದೆ ಸೇರಿದಂತೆ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್‌ನ ಎನ್‌ಎಸ್‌ಯುಐ ಜಂಟಿ ಕಾರ್ಯದರ್ಶಿ ಸ್ಥಾನ ಗೆಲ್ಲುವ ಮೂಲಕ ಮತ್ತೆ ಪ್ರವೇಶ ಪಡೆದಿದೆ.  ಇಂದು ಡಿಯುಎಸ್‌ಯು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ,ಯೂನಿಯನ್ ಅಧ್ಯಕ್ಷರಾಗಿ ಅಮಿತ್ ತನ್ವರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಮತ್ತು ಕಾರ್ಯದರ್ಶಿಯಾಗಿ ಅಂಕಿತ್ ಸಿಂಗ್ ಚುನಾಯಿತರಾದರು. ಇವರೆಲ್ಲರೂ ಎಬಿವಿಪಿಯವರು. ಕಾಂಗ್ರೆಸ್‌ನ ಎನ್‌ಎಸ್‌ಯುಐನ ಮೋಹಿತ್ ಗರಿಡ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin