ಡಿಯು ಹಲ್ಲೆ ಪ್ರಕರಣ : ಎಬಿವಿಪಿಯಿಂದ ಇಬ್ಬರ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ABVP--01

ನವದೆಹಲಿ, ಮಾ.1– ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಸದಸ್ಯರ ವಿರುದ್ಧ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಎಬಿವಿಪಿ ಕಾರ್ಯಕರ್ತರಿಬ್ಬರನ್ನು ಆರ್‍ಎಸ್‍ಎಸ್ ಸಂಘಟನೆಯಿಂದ ಅಮಾನತು ಮಾಡಿದೆ. ಇತ್ತೀಚೆಗೆ ದೆಹಲಿ ವಿಶ್ವವಿದ್ಯಾನಿಲಯ(ಡಿಯು)ದಲ್ಲಿ ನಡೆದ ಎಬಿವಿಪಿ ಮತ್ತು ಎಐಎಸ್‍ಎ ಸದಸ್ಯರ ನಡುವಿನ ಘರ್ಷಣೆ ಸಂದಂರ್ಭ ಸಂಘಟನೆಯ ಪ್ರಶಾಂತ್ ಮಿಶ್ರಾ ಮತ್ತು ವಿನಾಯಕ್ ಶರ್ಮಾ ಅವರು ಎಐಎಸ್‍ಎ ಕಾರ್ಯಕರ್ತರಾದ ರಾಜ್‍ಸಿಂಗ್ ಮತ್ತು ಉತ್ಕರ್ಷ್ ಭಾರದ್ವಾಜ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿತ್ತು.

ಎಬಿವಿಪಿ ಸಂಘಟನೆಯ ಸದಸ್ಯರು ಇಂತಹ ಕೃತ್ಯವನ್ನು ಎಸಗಿದ್ದರೇ ನಾವು ನಿಜಕ್ಕೂ ಅದನ್ನು ಖಂಡಿಸುತ್ತೇವೆ ಮತ್ತು ಅವರ ವಿರುದ್ಧ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ   ಸಾಕೇತ್ ಭುವನ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin