ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Ganapati
ಬೆಂಗಳೂರು. ಆ.26 : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ ಮಾಜಿ  ಗೃಹ ಸಚಿವ ಕೆ.ಜೆ. ಜಾರ್ಜ್  ಅವರು  ಸಿಐಡಿ ಎದುರು ವಿಚಾರಣೆಗೆ ಹಾಜರಾದರು. ಆತ್ಮಹತ್ಯೆಗೆ ಮುನ್ನ ಗಣಪತಿಯವರು ಜಾರ್ಜ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು ಇದು ರಾಜ್ಯದಾದ್ಯಂತ  ಭಾರಿ ಸಂಚಲನ ಸೃಷ್ಟಿಸಿ ವಿಧಾನಮಂಡಲ ಅಧಿವೇಶನದಲ್ಲೂ ಕೋಲಾಹಲ ಸೃಷ್ಟಿಸಿತ್ತು. ಕೊನೆಗೆ ಜಾರ್ಜ್ ರಾಜೀನಾಮೆ ನೀಡಿದ್ದರು.  ಇಂದು ಚರಣ್ ರೆಡ್ಡಿ ಅವರ ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮೇಲೆ ವಿವಿಧ ಪ್ರಶ್ನೆಗಳಿಗೆ ಜಾರ್ಜ್ ಉತ್ತರಿಸಿದ್ದಾರೆ. ಸಿಐಡಿ ತನಿಖೆ ಪ್ರಸ್ತುತ ಒಂದು ಹಂತಕ್ಕೆ ಬಂದು ನಿಂತಿದ್ದು, ಸದ್ಯದಲ್ಲಿ ವರದಿ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin