ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01

ಬೆಳಗಾವಿ(ಸುವರ್ಣಸೌಧ), ನ.16- ಇದೇ ಡಿಸೆಂಬರ್ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ವ್ಯವಸ್ಥೆಯನ್ನು ರಿಯಾಯ್ತಿ ದರದಲ್ಲಿ ಒದಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಸವಾಲು ಹಾಕಿದ್ದಾರೆ. ವಿಧಾನಸಭೆಯ ಶೂನ್ಯವೇಳೆಯಲ್ಲಿ ಖಾಸಗಿ ವೈದ್ಯರ ಮುಷ್ಕರದ ಬಗ್ಗೆ ಪ್ರಸ್ತಾಪವಾದ ವಿಷಯಕ್ಕೆ ಸ್ವಯಂಪ್ರೇರಿತವಾಗಿ ಉತ್ತರಿಸಿದ ಸಚಿವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಆದರೆ, ಅವರ ಜತೆ ಪ್ರಯೋಗಾಲಯಗಳಿಗೆ ಸಂಬಂಧಿಸಿದವರು ಸೇರಿ ಮುಷ್ಕರ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಮಸೂದೆಯಲ್ಲಿ ಪ್ರಯೋಗಾಲಯಗಳಿಗೆ ಸಂಬಂಧಪಟ್ಟ ಯಾವ ಅಂಶಗಳೂ ಇಲ್ಲ. ಆದರೂ ಮುಷ್ಕರ ವೈದ್ಯರ ಜತೆ ಪ್ರಯೋಗಾಲಯಗಳ ಮಾಲೀಕರು ಮತ್ತು ಸಿಬ್ಬಂದಿಗಳೂ ಸೇರಿದ್ದಾರೆ. ಇದು ದುರುದ್ದೇಶ ಪೂರಿತ ಎಂದು ಹೇಳಿದರು. ರಾಜ್ಯ ಸರ್ಕಾರ ಡಿಸೆಂಬರ್ ವೇಳೆಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಂಡಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಸೇವೆ ಒದಗಿಸಲಾಗುವುದು. ಖಾಸಗಿ ಪ್ರಯೋಗಾಲಯಗಳು ಡಯಾಲಿಸಿಸ್‍ಗೆ 8ಸಾವಿರ ಹಣ ವಸೂಲಿ ಮಾಡುತ್ತಿವೆ. ಆ ಸೇವೆಯನ್ನು ಜನರಿಗೆ ನಾವು ಉಚಿತವಾಗಿ ನೀಡಲು ಮುಂದಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳ ಮಾಲೀಕರಿಗೆ ಶತ್ರುವಾಗಿ ಕಂಡರೆ ನಾನು ಅಸಹಾಯಕ ಎಂದು ಹೇಳಿದರು.

Facebook Comments

Sri Raghav

Admin