ಡಿ.ಕೆ.ರವಿ ಕುಟುಂಬಕ್ಕೆ ಅಗತ್ಯ ನೆರವು : ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

tumakuru8

ತುಮಕೂರು, ಸೆ.16- ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಕುಟುಂಬದ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಹಂತ ಹಂತವಾಗಿ ಕೆಲ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.  ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಡಿ.ಕೆ.ರವಿ ಕುಟುಂಬದವರ ಜತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರವಿ ಅವರ ತಂದೆ-ತಾಯಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗಿದೆ. ಹಾಲಿ ಉಳುಮೆ ಮಾಡುತ್ತಿರುವ ಜಮೀನಿಗೆ ಮೂಲ ದಾಖಲಾತಿಗಳು ಇಲ್ಲ ಎಂದು ಹೇಳಲಾಗುತ್ತಿತ್ತು. ಅದನ್ನು ಪರಿಶೀಲಿಸಿ ಸಾಗುವಳಿ ಚೀಟಿ ನೀಡುವಂತೆ ಎಸಿ ಅವರಿಗೆ ಸೂಚಿಸಲಾಗಿದೆ. ದಾಖಲಾತಿ ವರದಿ ಸಿದ್ಧವಾದರೆ ಶಾಸಕರ ಕಮಿಟಿ ಸಾಗುವಳಿ ಚೀಟಿಯನ್ನು ಶೀಘ್ರದಲ್ಲೇ ಮಂಜೂರಾತಿ ನೀಡಲು ಅವಕಾಶವಿದೆ ಎಂದರು.

ಕೃಷಿ ಹೊಂಡ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದ್ದು, ಅವರ ಮನವಿಯನ್ನು ಸ್ವೀಕರಿಸಿ ಹೊಂಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ತೋರಿದ್ದರು. ಅದನ್ನು ತೋಟಗಾರಿಕೆ ಇಲಾಖೆಗೆ ಸೂಚಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ದೊಡ್ಡ ಕೊಪ್ಪಲು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಗ್ರಾಮದ 130 ಕುಟಂಬಗಳಿಗೆ ಪಡಿತರ ಚೀಟಿ ವಿತರಿಸಲು ಸಿದ್ಧತೆಯನ್ನು ಸಹ ಕೈಗೊಂಡಿದೆ. ಡಿ.ಕೆ.ರವಿ ಅವರ ಆಸೆಯಂತೆ ದೊಡ್ಡಕೊಪ್ಪಲು ಗ್ರಾಮವನ್ನು ಕೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಇದಲ್ಲದೆ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರಾತಿಗೂ ಸಹ ಕ್ರಮ ಕೈಗೊಳ್ಳಲಾಗಿದೆ. ರವಿ ಸಹೋದರ ರಮೇಶನ ಜೀವನೋಪಾಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿಯನ್ನು ಸಹ ಮಂಜೂರು ಮಾಡಲಾಗಿದೆ. ದೊಡ್ಡ ಕೊಪ್ಪಲು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಡಿ.ಕೆ.ರವಿ ಅವರ ಪ್ರಕರಣ ಸಿಬಿಐಗೆ ವಹಿಸಲಾಗಿತ್ತು. ಮತ್ತು ಯಾವ ಹಂತದಲ್ಲಿದೆ ಎಂದು ಸುದ್ದಿಗಾರರು ಸಚಿವರನ್ನು ಪ್ರಶ್ನಿಸಿದಾಗ ಸಿಬಿಐನಿಂದ ಇದುವರೆಗೂ ಯಾವುದೇ ವರದಿ ಬಂದಿಲ್ಲ. ವರದಿ ಕೊಡುವುದು ಅವರ ಜವಾಬ್ದಾರಿ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಕೇಂದ್ರದ ಗೃಹ ಸಚಿವರು ಮಧ್ಯಪ್ರವೇಶಿಸಿ ವರದಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಬೇಕಿದೆ ಎಂದರು.

ಶಾಸಕ ಡಿ.ನಾಗರಾಜಯ್ಯ ಮಾತನಾಡಿ, ಹುಲಿಯೂರು ದುರ್ಗದ ಬೈಲನಾಯಕನಹಳ್ಳಿಯಿಂದ ದೊಡ್ಡಕೊಪ್ಪಲು ಗ್ರಾಮದವರೆಗೆ ನಬಾರ್ಡ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸುಸಜ್ಜಿತ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ದೊಡ್ಡ ಕೊಪ್ಪಲು ಗ್ರಾಮದಲ್ಲಿರುವ ಶಾಲಾ ಕೊಠಡಿ ದುರಸ್ತಿಗೆ ಈಗಾಗಲೇ ಅನಿಲ ಕಂಪೆನಿಯೊಂದು ಮುಂದೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೋಹನ್‍ರಾಜ್, ರವಿ ತಂದೆ ಕರಿಯಪ್ಪ, ತಾಯಿ ಗೌರಮ್ಮ, ಸಹೋದರ ರಮೇಶ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin