ಡಿ.ದೇವರಾಜು ಅರಸು ಸಾಧನೆಗಳ ಜಾಗೃತಿ ಆಂದೋಲನಕ್ಕೆ ಡಿಸಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

devaraj--arasu

ಕೋಲಾರ, ಆ.18-ಮೌನಕ್ರಾಂತಿಯ ಹರಿಹಾರ ಡಿ.ದೇವರಾಜು ಅರಸು ಅವರ ಸಾಧನೆ ಮತ್ತು ರಾಜಕೀಯ ಸಾಧನೆಗಳ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರಗಳ ರಥಯಾತ್ರೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.  ಮಹಾನ್ ಮಾನವತಾವಾದಿ ಡಿ.ದೇವರಾಜು ಅರಸು ಅವರ 101 ನೇ ಜನ್ಮದಿನಾಚರಣೆ ಹಾಗೂ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದ ಸಲುವಾಗಿ ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆಯಿಂದ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಾರ್ಯಾಲದಿಂದ ಪ್ರಾರಂಭಗೊಂಡ ಮೆರವಣಿಗೆಯು ಹಳೇ ಬಸ್‍ನಿಲ್ದಾಣದ ಮಾರ್ಗವಾಗಿ ಎಸ್.ಎನ್.ಆರ್ ಆಸ್ಪತ್ರೆ, ಡೂಂಲೈಟ್ ಸರ್ಕಲ್, ಹೊಸ ಬಸ್‍ನಿಲ್ದಾಣದ ಮೂಲಕ ಸಾಗಿ ರಂಗಮಂದಿರದಲ್ಲಿ ಕೊನೆಗೊಂಡಿತು. ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ಡಿ.ದೇವರಾಜು ಅರಸು ಅವರ ಸಾಧನೆಗಳ ಕುರಿತ ಪುಸ್ತಕಗಳನ್ನು ಜನತೆಗೆ ಹಂಚಲಾಯಿತು. ಜಿ.ಪಂ. ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin