ಡೆಟಿಂಗ್‍ನಿಂದ ಸಾಂಸಾರಿಕ ಚೌಕಟ್ಟಿಗೆ ಧಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

AMERICA

ಬೆಂಗಳೂರ, ಡಿ.28- ಕೌಟುಂಬಿಕ ವ್ಯವಸ್ಥೆಯ ಚೌಕಟ್ಟುಗಳನ್ನು ಬದಿಗೊತ್ತಿ ಡೇಟಿಂಗ್‍ನಂತಹ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳುವುದರಿಂದ ಸಾಂಸಾರಿಕ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಲಂಡನ್ ಭಾರತೀಯ ವಿದ್ಯಾಭವನದ ಅಧ್ಯಕ್ಷ ಮತ್ತೂರು ನಂದಕುಮಾರ್‍ವಿಷಾದಿಸಿದರು. ಲಂಡನ್ನಿನ ವೆಂಬ್ಲಿಯಲ್ಲಿ ನಡೆದ ಸ್ಥಳೀಯ ಕನ್ನಡಿಗರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕ ಎಚ್.ಆರ್. ಪ್ರಭಾಕರ್ ಅವರ ಸಂಗಾತಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತಡದ ಬದುಕಿನಲ್ಲಿ ದಂಪತಿಗಳಿಬ್ಬರು ಕೆಲಸಕ್ಕೆ ಹೋಗುವ ಅನಿವಾರ್ಯತೆ ಇದೆ. ಬದುಕಿನ ಪ್ರತಿ ಘಟ್ಟದಲ್ಲೂ ಪರಸ್ಪರ ಹೇಗೆ ಸಾತ್ ನೀಡಬೇಕು ಎಂಬುದು ಈ ಧ್ವನಿಸುರುಳಿಯಲ್ಲಿ ವಿವರಿಸಲಾಗಿದೆ ಎಂದರು.  ಪ್ರತಿಯೊಂದಕ್ಕೂ ನಾನು, ನನ್ನದು ಎಂಬುದಕ್ಕಿಂತ ತಮ್ಮದು ಎಂಬ ಭಾವನೆ ಮೂಡಬೇಕು. ತಪ್ಪುಗಳಾದಾಗ ಮುಕ್ತ ಮನಸ್ಸಿನಿಂದ ಕ್ಷಮೆ ಕೇಳಿದರೆ ವಿರಸ, ಮುನಿಸುಗಳು ಕಡಿಮೆಯಾಗಲಿವೆ, ದಾಂಪತ್ಯ ಸುಗಮವಾಗಲಿದೆ ಎಂದರು. ವೈಭವಿ ಕ್ರಿಯೇಷನ್‍ನ ವಿನೋದಾ ಪ್ರಭಾಕರ್, ಗಣಪತಿಭಟ್ ಹಾಜರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin