ಡೆಪ್ಯೂಟಿ ಕಲೆಕ್ಟರ್ ಗೆ ಶಾಸಕನಿಂದ ಕಪಾಳ ಮೋಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Amensty

ಮುಂಬೈ, ಆ.17- ಪೊಲೀಸ್ ಸಿಬ್ಬಂದಿಯಿಂದ ಶೂ ಲೇಸ್ಗಳನ್ನು ಕಟ್ಟಿಸಿಕೊಂಡು ಒಡಿಶಾ ಸಚಿವ ಉದ್ಧಟತನ ಪ್ರದರ್ಶಿಸಿದ ಬೆನ್ನಲ್ಲೆ ಮಹಾರಾಷ್ಟ್ರದ ಶಾಸಕನೊಬ್ಬ ಡೆಪ್ಯೂಟಿ ಕಲೆಕ್ಟರ್ ಕೆನ್ನೆಗೆ ಬಾರಿಸಿದ ವಿಡಿಯೋ ಪ್ರಸಾರವಾಗಿದ್ದು ವಿವಾದ ಸೃಷ್ಟಿಸಿದೆ. ಕರ್ಜತ್ ವಿಧಾನಸಭಾ ಕ್ಷೇತ್ರದ ಎನ್ಸಿಪಿ ಶಾಸಕ ಸುರೇಶ್ ಲಾಡ್ ಮಹಾರಾಷ್ಟ್ರದ ರಾಯ್ಗಢ ಜಿಲ್ಲೆಯ ಉಪ ಕಲೆಕ್ಟರ್ ಅಭಯ್ ಕರ್ಗುಟ್ಕರ್ ಅವರಿಗೆ ಕಪಾಳ  ಮೋಕ್ಷ ಮಾಡಿ ಹಲ್ಲೆ ನಡೆಸಿದ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣ ಮತ್ತು ವಾರ್ತಾ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಭೂ ಸ್ವಾಧೀನ ವಿವಾದ ಇತ್ಯರ್ಥಕ್ಕೆ ಕರೆಯಲಾಗಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ. ರೈತರಿಗೆ ಪರಿಹಾರ ನೀಡುವ ವಿಷಯದಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಜನಪ್ರತಿನಿಧಿ ಮತ್ತು ಅಧಿಕಾರಿ ನಡುವೆ ವಾಗ್ವಾದ ನಡೆದು ಶಾಸಕ, ಡೆಪ್ಯೂಟಿ ಕಲೆಕ್ಟರ್ ಮೇಲೆ ಹಲ್ಲೆ ನಡೆಸಿದರು. ವಿಡಿಯೋದಲ್ಲಿ ಈ ದೃಶ್ಯ ಪ್ರಸಾರವಾದ ನಂತರವೂ ತಾವು ಹಲ್ಲೆ ನಡೆಸಿಲ್ಲ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಶಾಸಕರ ದರ್ಪದ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin