ಡೇವಿಸ್‍ಕಪ್ ಡಿನ್ನರ್ ವೇಳೆ ಸ್ನೇಹಿತೆಗೆ ಪ್ರಪೋಸ್ ಮಾಡಿ ಒಪ್ಪಿಗೆಯನ್ನೂ ಪಡೆದುಕೊಂಡ ಸಾಂಕೇತ್

ಈ ಸುದ್ದಿಯನ್ನು ಶೇರ್ ಮಾಡಿ

Prapouse

ನವದೆಹಲಿ,ಸೆ.15– ಭಾರತದ ಯುವ ಟೆನಿಸ್ ಆಟಗಾರ ಸಾಂಕೇತ್ ಮೈನೇವಿ ತಮ್ಮ ಸ್ನೇಹಿತೆ ಶ್ರೀ ಲಕ್ಷ್ಮಿ ಅನುಮೋಲ್‍ಗೆ ಮದುವೆ ಪ್ರಸ್ತಾಪವಿಟ್ಟು ಗುಲಾಬಿ ಹೂವು ಕೊಟ್ಟಿರುವ ಅಪರೂಪದ ಘಟನೆ ಡೇವಿಸ್‍ಕಪ್ ಔತಣಕೂಟದಲ್ಲಿ ನಡೆದಿದೆ. ಈ ಪ್ರಸ್ತಾಪಕ್ಕೆ ಪ್ರಿಯತಮೆ ಅನುಮೊಲ್ ಯೆಸ್ ಎಂದಿದ್ದು, ಮುಂಬರುವ ದಿನಗಳಲ್ಲಿ ನವಜೋಡಿಯಾಗಿ ಹಸಮಣೆ ಏರಲಿದ್ದಾರೆ. ಇಂತಹ ಅಪರೂಪ ಸನ್ನಿವೇಶಕ್ಕೆ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಔತಣಕೂಟದಲ್ಲೇ ನಿಶ್ಚಿತಾರ್ಥ ಕೇಕ್ ಕತ್ತರಿಸಿ ನವಜೋಡಿಗೆ ಶುಭಾಶಯ ಕೋರಿದೆ. ಈ ನಡುವೆ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಸೇರಿದಂತೆ ಅನೇಕ ಆಟಗಾರರು ನವಜೋಡಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಮದುವೆ ಪ್ರಸ್ತಾಪ ಮಾಡಿರುವ ಪ್ರಸಂಗ ಇದೇ ಮೊದಲು ಎಂದು ಖ್ಯಾತ ಟೆನಿಸ್ ಆಟಗಾರ ಪೇಸ್ ಹೇಳಿದ್ದಾರೆ. 28 ವರ್ಷದ ಭಾರತದ ಆಟಗಾರ ಮೊದಲ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಜೆರಿ ವೆಸ್ಲಿ ವಿರುದ್ಧ ಪ್ರಬಲ ಪೈಪೋಟಿ ನೀಡಿ ಸೋಲನುಭವಿಸಿ ನಿರಾಸೆ ಮೂಡಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin