‘ಡೊನಾಲ್ಡ್ ಟ್ರಂಪ್‍ ಪ್ರಾಮಾಣಿಕನಲ್ಲ’ : ಕಟು ಶಬ್ದಗಳಲ್ಲಿ ಟೀಕಿಸಿದ ಒಬಾಮ

ಈ ಸುದ್ದಿಯನ್ನು ಶೇರ್ ಮಾಡಿ

Trumpo

ವಾಷಿಂಗ್ಟನ್, ಅ.12-ಅಮೆರಿಕದ ಅಧ್ಯಕ್ಷರಾಗಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‍ಗೆ ಕನಿಷ್ಠ ಪ್ರಾಮಾಣಿಕತೆ ಇಲ್ಲ ಎಂದು ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ.
ಉತ್ತರ ಕರೋಲಿನಾದಲ್ಲಿ ನಿನ್ನೆ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಶ್ವೇತಭವನಕ್ಕೆ ತಮ್ಮ ಉತ್ತರಾಧಿಕಾರಿಯಾಗಲು ಟ್ರಂಪ್‍ಗೆ ಬದ್ಧತೆ, ಜ್ಞಾ ನ, ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಅಥವಾ ಮೂಲ ಪ್ರಾಮಾಣಿಕತೆ ಎಂಬುದೇ ಇಲ್ಲ. ಈ ಗುಣಗಳನ್ನು ಮೈಗೂಡಿಸಿಕೊಳ್ಳುವ ಇಚ್ಚೆಯೂ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಾಲ್ಕು ವಾರಗಳು ಬಾಕಿ ಇದ್ದು, ಟ್ರಂಪ್ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಓಬಾಮಾ, ಮಾಜಿ ವಿದೇಶಾಂಗ ಸಚಿವೆ ಮತ್ತು ಡೆಮೊಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಏತನ್ಮಧ್ಯೆ, ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ತೀವ್ರ ಮುಜುಗರಕ್ಕೆ ಸಿಲುಕಿರುವ ಟ್ರಂಪ್‍ನಿಂದ ರಿಪಬ್ಲಿಕನ್ ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ದೂರ ಸರಿಯುತ್ತಿದ್ದಾರೆ. ಇದರಿಂದ ಕುಪಿತಗೊಂಡಿರುವ ಟ್ರಂಪ್, ಸದನದ ಸ್ಪೀಕರ್ ಪಾಲ್ ರಯಾನ್‍ರಂಥ ಮುಖಂಡರ ಸಹಾಯ ತಮಗೆ ಬೇಕಿಲ್ಲ ಎಂದು ಗುಡುಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin